Advertisement
ರೋಹಿಂಗ್ಯಾ ಮುಸ್ಲಿಮರನ್ನು ದೆಹಲಿಯ ಬಕ್ಕಾರವಾಲಾದಲ್ಲಿರುವ ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗುವುದು ಎನ್ನುವ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಸಚಿವಾಲಯ ಈ ಸ್ಪಷ್ಟನೆ ಕೊಟ್ಟಿದೆ.
Related Articles
ರೋಹಿಂಗ್ಯಾ ವಲಸಿಗರು ದೇಶದ ಭದ್ರತೆಗೇ ಬೆದರಿಕೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. “ರೊಹಿಂಗ್ಯಾ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಕೇಜ್ರಿವಾಲ್ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ಬದಿಗಿಟ್ಟು ಇಂತಹ ಹೊಸಲು ರಾಜಕೀಯ ಮಾಡಲು ಹೊರಟಿತ್ತು. ಜನರ ದಾರಿ ತಪ್ಪಿಸಲು ಯತ್ನಿಸಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ದೂರಿದ್ದಾರೆ.
Advertisement
ರೋಹಿಂಗ್ಯಾ ವಲಸಿಗರನ್ನು ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗುವುದು, ಪೊಲೀಸ್ ಭದ್ರತೆ ನೀಡಲಾಗುವುದು ಎನ್ನುವ ಟ್ವೀಟ್ ಅನ್ನು ಬಿಜೆಪಿ ನಾಯಕ ಹದೀìಪ್ ಸಿಂಗ್ ಪುರಿ ಮಾಡಿದ್ದು, ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು.