Advertisement
ಕಂಪ್ಯೂಟರ್‌ಗಳ ಹೊರಮೈ ಅನ್ನು ಲೋಹದ ಹಾಳೆಗಳಿಂದ ಮಾಡಲಾಗಿರುತ್ತದೆ. ಕೆಲವೊಮ್ಮೆ ಅವನ್ನು ಮುಟ್ಟಿದಾಗ ಮೆಲ್ಲಗೆ ಶಾಕ್ ಹೊಡೆದ ಅನುಭವ ಆಗುತ್ತದೆ.
Related Articles
Advertisement
ಅರ್ಥಿಂಗ್ ಎಂದರೆ ಏನು?ವಿದ್ಯುತ್ ಶಕ್ತಿ ಬರಲು ಒಂದು ಪಿನ್ ಹಾಗೂ ಸಲಕರಣೆಯ ಮೂಲಕ ಹಾಯ್ದ ನಂತರ ಹೊರಹೋಗಲು ಮತ್ತೂಂದು ಪಿನ್ ಇದ್ದರೆ ಸಾಲದೇ? ಮೂರನೆ ಪಿನ್ ಏಕೆ ಬೇಕು? ಅದೂ ಅಷ್ಟೊಂದು ದಢೂತಿಯಾಗಿ ಏಕಿರಬೇಕು? ಕಾರ್ಯ ನಿರ್ವಹಿಸುವ ಪಿನ್‌ಗಳಿಗಿಂತ ಈ ಪಿನ್ ಏಕೆ ಅಷ್ಟೊಂದು ದಪ್ಪ ಆಗಿರಬೇಕು? ನಾವು ಪ್ಲಗ್ ಅಥವಾ ಸಾಕೆಟ್‌ಗಳಿಗೆ ಕೊಡುವ ಅರ್ಧದಷ್ಟು ಹಣ ಇದಕ್ಕೆ ಬಳಸಲಾಗುವ ತಾಮ್ರಕ್ಕೇ ವ್ಯಯವಾದಂತೆ ಕಾಣುತ್ತದೆ. ಅರ್ಥಿಂಗ್ ಪಿನ್ ನೋಡಿದರೆ ಹೀಗೆಲ್ಲಾ ಪಶ್ನೆಗಳು ಏಳುತ್ತವೆ. ಹಾಗಾದರೆ, ಈ ಮೂರನೆ ಪಿನ್ ಮಾಡುವ ಗುರುತರವಾದ ಕಾರ್ಯ ಏನು? ಎಂದು ಪರಿಶೀಲಿಸಿದಾಗ, ನಮಗೆ ಶಾಕ್ ಹೊಡೆಯದಂತೆ ತಡೆಯುವ “ಸೈನಿಕ’ ಎಂಬುದು ಅರಿವಾಗುತ್ತಿದ್ದಂತೆ ಈ ಮಧ್ಯಸ್ಥನ ಪ್ರಾಮುಖ್ಯತೆಯನ್ನು ಮೆಚ್ಚಲೇಬೇಕಾಗುತ್ತದೆ. ಬಹುತೇಕ ಎಲ್ಲ ವಿದ್ಯುತ್ ಸಲಕರಣೆಗಳ ಹೊರಮೈನ ಕೆಲ ಭಾಗಗಳಲ್ಲಾದರೂ ಲೋಹದ ಭಾಗಗಳಿರುತ್ತವೆ. ಇವನ್ನು ನಾವು ಆಕಸ್ಮಿಕವಾಗಿ ಮುಟ್ಟುವ ಸಾಧ್ಯತೆಯೂ ಇರುತ್ತದೆ. ವಿದ್ಯುತ್ ಮೋಟಾರ್ ಇತ್ಯಾದಿಗಳ ಹೊರಮೈಯನ್ನು ಇಂದಿಗೂ ಲೋಹಗಳಿಂದಲೇ ಮಾಡಿರುತ್ತಾರೆ. ಹಾಗಾಗಿ, ಇವು ಕಾರ್ಯ ನಿರ್ವಹಿಸುತ್ತಿರುವಾಗ ಒಂದಷ್ಟು ವಿದ್ಯುತ್ ಶಕ್ತಿ ಹೊರಮೈಗೆ ಹರಿದಿರುತ್ತದೆ. ಇವನ್ನು ನಾವು ಮುಟ್ಟಿದರೆ ಮೆಲ್ಲಗೆ ಶಾಕ್ ಹೊಡೆಯುತ್ತದೆ. ಈ ರೀತಿಯಾಗಿ ಹೆಚ್ಚುವರಿಯಾಗಿ “ಹೊರಹೊಮ್ಮುವ’ ಎನ್ನಬಹುದಾದ ವಿದ್ಯುತ್ ಶಕ್ತಿ ನಿರುಪದ್ರವಿಯಾಗಿ ಹೊರದೂಡಲು ಬಳಸುವುದೇ ಅರ್ಥಿಂಗ್ ಎಂಬ ವ್ಯವಸ್ಥೆ. ಒಂದು ರೀತಿಯಲ್ಲಿ ಇದು ತ್ಯಾಜ್ಯ ವಿದ್ಯುತ್. ನಾವು ತ್ಯಾಜ್ಯವನ್ನು ಭೂಮಿಯೊಳಗೆ ಹುದುಗಿಸುವಂತೆ, ಹೆಚ್ಚುವರಿ ವಿದ್ಯುತ್ ಭೂಮಿಯಲ್ಲಿ ಇಂಗಿಹೋಗುವಂತೆ ವ್ಯವಸ್ಥೆ ಮಾಡುವುದೇ ಅರ್ಥಿಂಗ್‌ನ ಮುಖ್ಯ ಉದ್ದೇಶ. ಸಲಕರಣೆಗಳು
ಮೂರು ಪಿನ್ ಅಳವಡಿಸಿರುವ ಎಲ್ಲ ಸಲಕರಣೆಗಳನ್ನು ಕಡ್ಡಾಯವಾಗಿ ಭೂಸ್ಪರ್ಷ ಹೊಂದಿರುವ ಸ್ಥಳದಲ್ಲೇ ಸಿಗಿಸಬೇಕು. ಲ್ಯಾಪ್‌ಟಾಪ್‌ಗ್ಳು ಬ್ಯಾಟರಿ ಸೆಲ್‌ಗಳಿಂದ ಓಡಿದರೂ ಅವಕ್ಕೆ ಅರ್ಥಿಂಗ್ ಬಹುಮುಖ್ಯ. ಇನ್ನು ಹೆಚ್ಚು ವಿದ್ಯುತ್ ಬಳಸುವ ನೀರಿನ ಪಂಪ್, ಗೀಸರ್, ಟಿವಿ, ಇತ್ಯಾದಿಗಳಿಗೂ ಅರ್ಥಿಂಗ್ ಕಡ್ಡಾಯವಾಗಿ ನೀಡಬೇಕು. ಕೆಲವೊಮ್ಮೆ ಆಕಸ್ಮಿಕವಾಗಿ ಯಾವುದಾದರೂ ವಿದ್ಯುತ್ ವಾಹಕ ಸಡಿಲವಾಗಿ ಹೆಚ್ಚುವರಿ ವಿದ್ಯುತ್ ಪ್ರವಹಿಸಿದರೂ, ಹೆಚ್ಚು ಹಾನಿ ಆಗದಂತೆ ತಡೆಯಲು ಭೂಸ್ಪರ್ಷಕಗಳು ಉಪಯುಕ್ತ. ಅರ್ಥಿಂಗ್ ವಿಧಾನಗಳು
ನಮ್ಮ ಮನೆಯ ವಿಸ್ತೀರ್ಣದ ಆಧಾರದ ಮೇಲೆ ಆರರಿಂದ ಎಂಟು ಅಡಿಗಳ ಗುಂಡಿ ತೋಡಿ, ಅದರಲ್ಲಿ ಒಂದೂವರೆ ಇಲ್ಲವೇ ಎರಡು ಇಂಚಿನ ಜಿ ಐ ಪೈಪ್ ಅನ್ನು ಸಾಮಾನ್ಯವಾಗಿ ಹಾಕಲಾಗುತ್ತದೆ. ಈ ಕೊಳವೆಯ ಕೆಳಭಾದಲ್ಲಿ ಸುಮಾರು ಒಂದು ಚದರ ಅಡಿಗಳಷ್ಟು ವಿಸ್ತಾರವಾದ ತಾಮ್ರದ ದಪ್ಪನೆಯ ತಗಡನ್ನು, ತಾಮ್ರದ ನಟ್ ಬೋಲ್ಟ್ ಹಾಕಿ ಬಿಗಿಗೊಳಿಸಲಾಗುತ್ತದೆ. ಇದಕ್ಕೆ ದಪ್ಪನೆಯ ತಾಮ್ರದ ತಂತಿಯನ್ನು ಸುತ್ತಿ, ಕೊಳವೆಯನ್ನು ಸುತ್ತುತ್ತ ಮೇಲೆ ಬಂದು ಅಲ್ಲಿ ಇನ್ನೊಂದು ನಟ್ ಬೋಲ್ಟ್ ಸಹಾಯದಿಂದ ಮತ್ತೂಮ್ಮೆ ಬಿಗಿಗೊಳಿಸಿದ ನಂತರ ಮನೆಗೆ ಸಂಪರ್ಕ ನೀಡಲಾಗುತ್ತದೆ. ಭೂಮಿಗೆ ವಿದ್ಯುತ್ ಹೀರಿಕೊಳ್ಳುವ ಗುಣವನ್ನು ವೃದ್ಧಿಸಲು ಗುಂಡಿಗೆ ಸುಮಾರು ಇಪ್ಪತ್ತೈದು ಕೆಜಿಯಷ್ಟು ಉಪ್ಪು ಹಾಗೂ ಒಂದು ಚೀಲ ಇಜ್ಜಿಲನ್ನು ಸುರಿದು ನೀರನ್ನು ಉಣಿಸಲಾಗುತ್ತದೆ. ಈ ಮಾದರಿಯ ಅರ್ಥಿಂಗ್ ಮನೆಯ ಹೊರಗೆ, ಸಾಮಾನ್ಯವಾಗಿ ಮೀಟರ್ ಹತ್ತಿರ ಮಾಡಲಾಗುತ್ತದೆ. ಅರ್ಥಿಂಗ್ ಮಾಡಿದ್ದರೂ ಶಾಕ್ ಹೊಡೆಯುತ್ತಿದೆಯೆ?
ಕೆಲವೊಮ್ಮೆ ಹತ್ತಾರು ವರ್ಷದ ಹಿಂದೆ ಮಾಡಿದ ಭೂಸ್ಪರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸದೇ ಇರಬಹುದು. ಅದರಲ್ಲಿನ ಉಪ್ಪೆಲ್ಲ ಮಣ್ಣಿನಲ್ಲಿ ಇಂಗಿಹೋಗಿ ಸರಿಯಾಗಿ ವಿದ್ಯುತ್ ಹೀರದೆ ಇರಬಹುದು. ಹಣ ಉಳಿಸಲು ಕೆಲವೊಮ್ಮೆ ತಾಮ್ರದ ತಂತಿಯ ಬದಲು ಜಿ ಐ ವೈರ್ ಅನ್ನು ಕೊಳವೆಗೆ ಸುತ್ತಿ ಹುದುಗಿಸಿರ ಬಹುದು. ಇದು ಕೆಲ ವರ್ಷಗಳ ಕಾಲ ಸರಿಯಾಗಿ ಕಾರ್ಯ ನಿರ್ವಹಿಸಿದರೂ ನಂತರ ತುಕ್ಕು ಹಿಡಿದು ಕರಗಿ ಹೋಗಬಹುದು. ಆದುದರಿಂದ ನಿಮ್ಮ ಸಲಕರಣೆಗಳನ್ನು ಮುಟ್ಟಿದರೆ ಶಾಕ್ ಹೊಡೆದ ಅನುಭವ ಆದರೆ, ಅರ್ಥಿಂಗ್ ನಲ್ಲಿ ಏನಾದರೂ ನ್ಯೂನತೆ ಇದೆಯೇ? ಎಂದು ಪರಿಶೀಲಿಸಿ ನಂತರ ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಬಹುದು.
ವಿದ್ಯುತ್ ಸಲಕರಣೆಗಳು ಅದರಲ್ಲೂ ಈಗ ಬರುತ್ತಿರುವ ಅತಿ ಸಂಕೀರ್ಣ ಹಾಗೂ ನಾಜೂಕಾದ ಹೈಟೆಕ್ ಸಾಧನಗಳಿಗೆ ಉತ್ತಮ ಅರ್ಥಿಂಗ್ ವ್ಯವಸ್ಥೆ ಮಾಡುವುದು ಅತ್ಯಗತ್ಯ. ಈ ಗ್ಯಾಡೆjಟ್‌ಗಳಿಂದ ನಮಗೆ ವಿದ್ಯುತ್ ಶಾಕ್ ಆಗುವುದನ್ನು ತಡೆಯುವುದರ ಜೊತೆಗೆ ಹೈಟೆಕ್ ಸಾಧನಗಳು ಯಶಸ್ವಿಯಾಗಿ ಕಾರ್ಯನಿರ್ವಸಲು ಕೂಡ ಭೂಸಂಪರ್ಕಕಗಳು ಮುಖ್ಯವಾಗುತ್ತವೆ. – ಆರ್ಕಿಟೆಕ್ ಕೆ ಜಯರಾಮ್ ಹೆಚ್ಚಿನ ಮಾಹಿತಿಗೆ ಫೋನ್ 98441 32826