Advertisement

ಕೆಮಿಕಲ್‌ ಲ್ಯಾಬ್‌ನಿಂದ ಕೃಷಿ ಹೊರಬರಲಿ: ಪ್ರಧಾನಿ ಮೋದಿ

11:49 PM Dec 16, 2021 | Team Udayavani |

ಆನಂದ್‌: “ದೇಶದ ಎಲ್ಲ ರೈತರೂ ಸಾವಯವ ಅಥವಾ ನೈಸರ್ಗಿಕ ಕೃಷಿಯತ್ತ ಮುಖ ಮಾಡಬೇಕು. ಕೃಷಿಯನ್ನು ಕೆಮಿಕಲ್‌ ಲ್ಯಾಬೊರೇಟರಿಯಿಂದ ಹೊರತಂದು ನಿಸರ್ಗದ ಪ್ರಯೋಗಾಲಯಕ್ಕೆ ಸಂಪರ್ಕ ಕಲ್ಪಿಸಬೇಕಾದ ಅಗತ್ಯತೆಯಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಗುರುವಾರ ಗುಜರಾತ್‌ನ ಆನಂದ್‌ನಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ವರ್ಚುವಲ್‌ ಭಾಷಣ ಮಾಡಿದ ಅವರು, “ಹಸುರು ಕ್ರಾಂತಿಯಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಪ್ರಮುಖ ಪಾತ್ರ ವಹಿಸಿರುವುದು ಸತ್ಯವೇ ಆಗಿದೆ. ಆದರೆ ಈಗ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಕೃಷಿ ಸಂಬಂಧಿ ಸಮಸ್ಯೆಗಳು ಗಂಭೀರ ಸ್ಥಿತಿಗೆ ತಲುಪುವ ಮುನ್ನವೇ ದೊಡ್ಡಮಟ್ಟದ ಹೆಜ್ಜೆ ಇಡಲು ಇದು ಸರಿಯಾದ ಸಮಯ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಕಳೆ ಸುಡುವ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೋದಿ, ಇಂಥ ಅಭ್ಯಾಸವು ಕೃಷಿ ಭೂಮಿಯ ಫ‌ಲವತ್ತತೆಗೆ ಹಾನಿ ಉಂಟು ಮಾಡುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next