Advertisement
ಆರೋಗ್ಯಕರ ಆಹಾರಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಅತ್ಯಾವಶ್ಯಕ. ಪ್ರೋಟಿನ್, ಕಾಬೋìಹೈಡ್ರೇಟ್ ಮತ್ತು ಫ್ಯಾಟ್ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಸ್ನಾಯು ನೋವು ತ್ವರಿತವಾಗಿ ಸರಿಯಾಗುತ್ತದೆ. ಈ ಆಹಾರದೊಂದಿಗೆ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಕ್ಕರೂ ಮುಂದೆ ನಿಮಗೆ ವಕೌìಟ್ ನೋವು ಇರುವುದಿಲ್ಲ. ಹಾಗೆಯೇ ಫಿಟೆ°ಸ್ ತಜ್ಞರ ಮೂಲಕ ನೀವು ಪ್ರೋಟಿನ್ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು.
ಕೊಬ್ಬಿನ ಅಂಶವಿರುವ ಆಹಾರ ವರ್ಕೌಟ್ ನೋವು ಕಡಿಮೆ ಮಾಡಲು, ಒಮೆಗಾ -3 ಕೊಬ್ಬಿನ ಅಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಮೀನು- ಮಾಂಸ, ವಾಲ…ನಟ್ಸ… ಇತ್ಯಾದಿಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಕಂಡುಬರುತ್ತದೆ.
ತಾಲೀಮು ಅನಂತರ, ನೋವು ಇರುವ ಜಾಗದಲ್ಲಿ ಐಸ್ ಪ್ಯಾಕ್ ಇಟ್ಟುಕೊಳ್ಳಿ. ಇದು ನೋವು ಮತ್ತು ಉರಿಯೂತ ಎರಡನ್ನೂ ಕಡಿಮೆ ಮಾಡುತ್ತದೆ. - ಕಾರ್ತಿಕ್ ಚಿತ್ರಾಪುರ