Advertisement
ಹಲವು ಬಾರಿ ಮಾತುಕತೆ ನಡೆದರೂ ಚೀನ ತನ್ನ ನರಿ ಬುದ್ಧಿ ಯನ್ನು ಬಿಟ್ಟಿಲ್ಲ. ಮಾತುಕತೆ ವೇಳೆ ಎಲ್ಲ ಷರತ್ತುಗಳಿಗೂ ಒಪ್ಪಿದರೂ ಮತ್ತೆ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಆಸುಪಾಸಿನಲ್ಲಿ ಮೂಲಸೌಕರ್ಯ ಅಭಿ ವೃದ್ಧಿಯಲ್ಲಿ ತೊಡಗಿದೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಜ| ರಾವತ್ ಅವರು ತೀಕ್ಷ್ಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಹಲವು ಸುತ್ತುಗಳ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದರೂ ಗಡಿ ಬಿಕ್ಕಟ್ಟು ಶಮನಗೊಳಿಸುವಲ್ಲಿ ಪೂರ್ಣ ಯಶಸ್ಸು ಸಿಕ್ಕಿಲ್ಲ. ಗಾಲ್ವಾನ್ ಕಣಿವೆ ಪ್ರದೇಶ ದಿಂದ ಚೀನದ ಸೇನೆ ಹಿಂದಕ್ಕೆ ಸರಿದರೂ ಪ್ಯಾಂಗಾಂಗ್ ತೊ, ಡೆಪ್ಸಾಂಗ್ ಮತ್ತಿತರ ಪ್ರದೇಶಗಳಲ್ಲಿ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜ| ರಾವತ್ ಅವರ ಹೇಳಿಕೆಯು ಮಹತ್ವ ಪಡೆದಿದೆ. ಚೀನಕ್ಕೆ ಸಡ್ಡು ಹೊಡೆಯಲು ಭಾರತ ಚಿಂತನೆ
ಮ್ಯಾನ್ಮಾರ್, ಪಾಕಿಸ್ಥಾನ ಮತ್ತು ಇರಾನ್‌ನಲ್ಲಿ ಸರಣಿ ಬಂದರು ನಿರ್ಮಿಸುವ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಚೀನಕ್ಕೆ ಸಡ್ಡು ಹೊಡೆಯಲು ಭಾರತ ಮುಂದಾಗಿದೆ. ಹಿಂದೂ ಮಹಾಸಾಗರ ಪ್ರದೇಶವನ್ನು ದಕ್ಷಿಣ ಚೀನ ಸಮುದ್ರದಂತೆ ಆಗಲು ಬಿಡಬಾರದು ಮತ್ತು ನ್ಯಾವಿಗೇಷನ್ ಮೇಲೆ ಯಾವುದೇ ನಿರ್ಬಂಧ ಉಂಟಾಗ ಬಾರದು ಎಂಬ ಉದ್ದೇಶದಿಂದ ಭಾರತವು ತನ್ನ ದ್ವೀಪ ಪ್ರದೇಶ ಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಿದೆ.
Related Articles
Advertisement
ಅಂಡಮಾನ್‌ನ ಉತ್ತರ ಭಾಗದ ಶಿಬ್‌ಪುರದಲ್ಲಿರುವ ಐಎನ್‌ಎಸ್ ಕೊಹಸ್ಸಾ ವಾಯುನೆಲೆ ಮತ್ತು ನಿಕೋಬಾರ್‌ನ ಕ್ಯಾಂಪ್‌ಬೆಲ್ ವಾಯುನೆಲೆಯನ್ನು ಪೂರ್ಣಪ್ರಮಾಣದ ಸಮರ ವಾಯುನೆಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸ ಲಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ. ಲಕ್ಷದ್ವೀಪದಲ್ಲಿನ ಅಗಟ್ಟಿ ಏರ್‌ಸ್ಟ್ರಿಪ್ ಅನ್ನೂ ಸೇನಾ ಕಾರ್ಯಾ ಚರಣೆಯ ಉದ್ದೇಶಕ್ಕಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸ ಲಾಗಿದೆ. ಆ ಮೂಲಕ ಬಂಗಾಲಕೊಲ್ಲಿಯ ಮಲಕ್ಕಾ ಸಂಧಿಯ ವರೆಗೆ ಮತ್ತು ಅರಬಿ ಸಮುದ್ರದ ಆಡೆನ್ ಕೊಲ್ಲಿಯ ವರೆಗಿನ ಪ್ರದೇಶದ ವರೆಗೆ ಹದ್ದುಗಣ್ಣು ಇರಿಸಲು ಭಾರತಕ್ಕೆ ಸಾಧ್ಯವಾಗುತ್ತದೆ.