Advertisement

ಬೆಳಗಾವಿಯಲ್ಲಿ ಮುಂದಿನ ಅಧಿವೇಶನ ನಡೆಸಿ: ಸಭಾಪತಿ ಬಸವರಾಜ ಹೊರಟ್ಟಿ

02:33 PM Jun 29, 2021 | Team Udayavani |

ಹುಬ್ಬಳ್ಳಿ: ಮುಂದಿನ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವಂತೆ ಸರಕಾರಕ್ಕೆ ಸೂಚನೆ ನೀಡಿದ್ದೇನೆ. ವಿಧಾನಸಭಾಧ್ಯಕ್ಷರ ಅಭಿಪ್ರಾಯ ಕೂಡ ಇದಾಗಿದ್ದು, ಸರಕಾರ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018 ರಲ್ಲಿ ಬೆಳಗಾವಿಯಲ್ಲಿ ಅಧವೇಶನ ಮಾಡಲಾಗಿತ್ತು. ನಂತರದಲ್ಲಿ ಯಾವುದೇ ಅಧಿವೇಶನ ನಡೆದಿಲ್ಲ. ಹೀಗಾಗಿ ಮುಂದಿನ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಇದೇ ಅಭಿಪ್ರಾಯವನ್ನು ವಿಧಾನಸಭೆ ಅಧ್ಯಕ್ಷರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ:ಸಾಲ ತಂದಾದರೂ ನೀರಾವರಿ ಯೋಜನೆಗಳ ಕಾಮಗಾರಿ ಮುಗಿಸುತ್ತೇವೆ: ಸಿಎಂ ಯಡಿಯೂರಪ್ಪ

ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ಣ ಶುಲ್ಕ ವಸೂಲಿ ಸರಿಯಲ್ಲ. ಈ ವಿಚಾರದಲ್ಲಿ ಕೆಲವು ಗೊಂದಲಗಳು ಇವೆ. ಮಾನವೀಯತೆ ದೃಷ್ಟಿಯಿಂದ ವಿದ್ಯಾರ್ಥಿಗಳ ಕೌಟುಂಬಿಕ ಪರಿಸ್ಥಿತಿ ಅರಿತು ಶುಲ್ಕ ಪಡೆಯಬೇಕು. ಕಾನೂನು, ನಿಯಮದ ಜೊತೆಗೆ ಮಾನವೀಯತೆ ಕೂಡ ಇರಬೇಕು. ಶಾಲೆ ಆಡಳಿತ ಮಂಡಳಿಗಳ ಆರ್ಥಿಕ ಸ್ಥಿತಿ ನೋಡಿಕೊಂಡು ಸರಕಾರ ಶುಲ್ಕ ನಿರ್ಧರಿಸಬೇಕು. ಶುಲ್ಕ ಪಾವತಿ ಮಾಡುವ ಸಾಮರ್ಥ್ಯವುಳ್ಳ ಪಾಲಕರು ಕೂಡ ಕೋವಿಡ್ ನೆಪ ಹೇಳಿ ಶುಲ್ಕ ಪಾವತಿಗೆ ಹಿಂದೇಟು ಹಾಕುವುದು ಸರಿಯಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next