Advertisement

ಹಟ್ಟಿಯಂಗಡಿ: ಸರಕಾರಿ ಆಸ್ಪತ್ರೆಗೆ ಇಸಿಜಿ ಯಂತ್ರ ಕೊಡುಗೆ

12:07 AM Jun 15, 2019 | Team Udayavani |

ಕುಂದಾಪುರ: ಹಟ್ಟಿಯಂಗಡಿ ಸರಕಾರಿ ಆಸ್ಪತ್ರೆಗೆ ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಅವರ ಸಿಎಡಿ (ಕಾರ್ಡಿಯೋಲಜಿ ಆರ್‌ ಡೋರ್‌ ಸ್ಟೆಪ್‌) ಯೋಜನೆ ಮೂಲಕ ಕಾಯಕಲ್ಪ ವಾಟ್ಸ್ಯಾಪ್‌ ಗ್ರೂಪ್‌ನಿಂದ ಇಸಿಜಿ ಯಂತ್ರ ನೀಡಲಾಗಿದೆ.

Advertisement

ಸರಕಾರಿ ಆಸ್ಪತ್ರೆ, ಜನೌಷಧಿ ಕೇಂದ್ರ ಹಾಗೂ ಹಳ್ಳಿಗಳ ಕ್ಲಿನಿಕ್‌ಗಳಿಗೆ ಈ ಯಂತ್ರಗಳನ್ನು ದಾನಿಗಳ ಮೂಲಕ ಅನುದಾನ ಸಂಗ್ರಹಿಸಿ ನೀಡಲಾಗುತ್ತಿದ್ದು ಹಟ್ಟಿಯಂಗಡಿಗೆ ನೀಡಿದ ಯಂತ್ರ 150ನೇ ಯಂತ್ರವಾಗಿದೆ. ಇದೇ ದಿನ ಭಟ್ಕಳದಲ್ಲಿ ಜನೌಷಧಿ ಕೇಂದ್ರಕ್ಕೆ ಇಸಿಜಿ ಯಂತ್ರ ನೀಡಲಾಗಿದೆ.

ಉಚಿತವಾಗಿ ಇಸಿಜಿ ಯಂತ್ರಗಳನ್ನು ನೀಡುವ ಮೂಲಕ ಹಳ್ಳಿ ಪ್ರದೇಶ ಹಾಗೂ ಸೌಕರ್ಯಗಳಿಲ್ಲದ ಕಡೆಗಳಲ್ಲಿ ಹೃದ್ರೋಗಿಗಳಿಗೆ ಆಗುವ ತೊಂದರೆ ತಪ್ಪಿಸಲು ನೆರವಾಗಲಾಗುತ್ತಿದೆ. ಈಗಾಗಲೇ ಸಾವಿರಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

ಹೃದ್ರೋಗ ವೈದ್ಯರು ಇಲ್ಲದಿದ್ದರೂ ಹೃದಯಬೇನೆ ಅಥವಾ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಿದಾಗ ತುರ್ತಾಗಿ ಇಸಿಜಿ ಮಾಡಿಸಿಕೊಂಡು ಪ್ರಥಮ ಚಿಕಿತ್ಸೆ ಪಡೆದು ನಂತರ ಯಾವುದೇ ಹೃದ್ರೋಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬಹುದು. ಇದರಿಂದಾಗಿ ಪ್ರಾಣಹಾನಿ ತಪ್ಪುತ್ತದೆ. ಹಾಗೂ ಮೊದಲೇ ಇಸಿಜಿ ಮಾಡಿಸಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗುವುದು ತಪ್ಪುತ್ತದೆ. ರೋಗಿಯ ಸ್ಥಿತಿಯ ಕುರಿತು ವೈದ್ಯರಿಗೆ ತಿಳಿಸಿದರೆ ಸೂಕ್ತ ಚಿಕಿತ್ಸೆಗೆ ಸಿದ್ಧವಾಗಿರಲು ಅನುವಾಗುತ್ತದೆ. ಹಟ್ಟಿಯಂಗಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಂಗನಾಥ್‌ ಅವರು ಇಸಿಜಿ ಯಂತ್ರ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next