Advertisement
ಆರಂಭವಾಗಿದ್ದು ಯಾವಾಗ?ಹಟ್ಟಿ ಪಟ್ಟಣದಲ್ಲಿ 1947, ಜು.7ರಂದು ಚಿನ್ನದಗಣಿ ಕಂಪನಿ ಶುರುವಾಯಿತು. 1956ರಲ್ಲಿ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ’ ಎಂದು ಮರು ನಾಮಕರಣ ಮಾಡಲಾಯಿತು. ಜು.8ಕ್ಕೆ 76 ವರ್ಷ ಪೂರೈಸಿ ಮುನ್ನುಗ್ಗುತ್ತಿದೆ. ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಜಾಗತಿಕ ಸ್ವರ್ಣ ಕೌನ್ಸಿಲ್‌ನ ಸದಸ್ಯತ್ವ ಪಡೆದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವುದು ವಿಶೇಷ. ಕೆಜಿಎಫ್ ಅಸ್ತಿತ್ವ ಕಳೆದುಕೊಂಡಿದ್ದರೂ ಹಟ್ಟಿ ಮಾತ್ರ ತನ್ನ ಖದರ್ ಇನ್ನೂ ಉಳಿಸಿಕೊಂಡಿದೆ.
ಪ್ರತಿ 100 ಅಡಿ ಆಳದಲ್ಲಿ ಅದಿರು ಅಗೆದು ಸಂಸ್ಕರಣೆ ಮಾಡಿಕೊಂಡು ಬರುತ್ತಿದ್ದು, ಈಗ ಸರಿಸುಮಾರು 3, 200 ಅಡಿ ಆಳಕ್ಕಿಂತ ಹೆಚ್ಚು ಅದಿರು ತೆಗೆಯಲಾಗಿದೆ. ಸರಿಯಾದ ಆಮ್ಲಜನಕ ಸಿಗದ ಭೂಗರ್ಭದಾಳದಲ್ಲಿ ಕಾರ್ಮಿಕರು ಇಳಿದು ಚಿನ್ನ ಸೋಸುವ ಕಾಯಕ ಮಾಡುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ತೆಗೆಯುವುದು ಸುಲಭದ ಕೆಲಸವೇನಲ್ಲ. ಟನ್‌ಗಟ್ಟಲೇ ಅದಿರು ತೆಗೆದರೆ ಗ್ರಾಂಗಳ ಲೆಕ್ಕದಲ್ಲಿ ಚಿನ್ನ ಸಿಗುತ್ತದೆ. 4, 200 ಕಾರ್ಮಿಕರ ಶ್ರಮ
ಹಟ್ಟಿ ಗಣಿಯಲ್ಲಿ ಈಗ 4 200ಕ್ಕೂ ಅಧಿ ಕ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೈದ್ರಾಬಾದ್ ನಿಜಾಮರ ಕಾಲದಲ್ಲಿ ಬ್ರಿಟಿಷರಿಂದ ಶುರುವಾದ ಈ ಕಂಪನಿಯಲ್ಲಿ ಮಲ್ಲಪ್ಪ, ಸೆಂಟ್ರಲ್ ಹಾಗೂ ವಿಲೆØàಜ್ ಎನ್ನುವ ಮೂರು ಶಿಫ್ಟ್‌ಗಳಲ್ಲಿ ಕಾರ್ಮಿಕರು ಚಿನ್ನ ತೆಗೆಯುವಲ್ಲಿ ನಿರತರಾಗಿದ್ದಾರೆ. ಸೆಂಟ್ರಲ್ ಶಾಫ್ಟ್ ಬ್ರಿಟಿಷರಿಂದ ನಾಮಕರಣಗೊಂಡಿದ್ದು, ಹಟ್ಟಿಯಲ್ಲೇ ಇರುವ ಈ ವಿಭಾಗದಿಂದ 80 ಕಿಮೀ ವ್ಯಾಸದಲ್ಲಿ ಚಿನ್ನ ಸಿಗುತ್ತದೆ. ದೇವದುರ್ಗ ತಾಲೂಕಿನ ಊಟಿ ಹಾಗೂ ಮಾನವಿ ತಾಲೂಕಿನ ಹೀರಾ-ಬುದ್ಧಿನ್ನಿಯಲ್ಲೂ ಅದಿರು ಸಂಸ್ಕರಿಸಲಾಗುತ್ತಿದೆ. ಹಟ್ಟಿಯ ಪಶ್ಚಿಮ ದಿಕ್ಕಿನಲ್ಲಿ ಹಾಗೂ ವಂದಲಿ ಹೊಸೂರಿನಲ್ಲಿ ಡ್ರಿಲ್ಲಿಂಗ್ ಮುಗಿಸಿದ್ದು, ಗ್ರೇಡಿಂಗ್ ಆಧರಿಸಿ ಗಣಿಗಾರಿಕೆ ವಿಸ್ತರಿಸಲು ಕಂಪನಿ ಯೋಜನೆ ರೂಪಿಸಿದೆ.