Advertisement

ಮನೆಯಲ್ಲಿಯೇ ಇರಿ, ಸರಳವಾಗಿ ಹಬ್ಬ ಆಚರಣೆ ಮಾಡಿ: ಶಿವಣ್ಣ ಮನವಿ

02:32 PM Mar 25, 2020 | Mithun PG |

ಬೆಂಗಳೂರು: ದೇಶದೆಲ್ಲೆಡೆ ಕೋವಿಡ್ -19 ವೈರಸ್ ಆತಂಕ ಸೃಷ್ಟಿಸಿರುವುದರಿಂದ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸರ್ಕಾರವೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಸರ್ಕಾರ ಹೊರಡಿಸಿದ ಆದೇಶ ಪಾಲಿಸೋಣ. ಕೋವಿಡ್ ಓಡಿಸುವುದು ನಮ್ಮ ಕರ್ತವ್ಯ. ಯುಗಾದಿ ಹಬ್ಬದ ಅದ್ದೂರಿ ಆಚರಣೆ ಬೇಡ, ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

ಸರ್ಕಾರ ಆದೇಶವಿದ್ದರೂ ಜನತೆ ಹಬ್ಬದ ಸಲುವಾಗಿ ಮಾರುಕಟ್ಟೆಗಳತ್ತ ಧಾವಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಗಾಗಲೇ ದೇಶದೆಲ್ಲೆಡೆ ಜನರು ಭಯಭೀತರಾಗಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದರೂ ಹೊರಬರುವುದೇಕೆ ? ಪೊಲೀಸರ ಲಾಠಿಗೆ ಕೆಲಸ ಕೊಡಬೇಡಿ. ದಯಾಮಾಡಿ ಕುಟುಂಬದೊಂದಿಗೆ ಮನೆಯಲ್ಲಿಯೇ ಹಬ್ಬ ಮಾಡಿ. ಅಗಾಗ ಕೈ ತೊಳೆಯುತ್ತಿರಿ. ಸರ್ಕಾರದ ಆದೇಶ ಪಾಲಿಸಿ ಎಂದು ಮನವಿ ಮಾಡಿದ್ದಾರೆ.

ನಟ ನೀನಾಸಂ ಸತೀಶ್ ಕೂಡ ,ಮನವಿ ಮಾಡಿಕೊಂಡಿದ್ದು, ಬದುಕಿದ್ದರೇ ಮುಂದಿನ ವರ್ಷ ಕೂಡ ಯುಗಾದಿ ಮಾಡಬಹುದು. ದಯವಿಟ್ಟು ಮನೆಯಲ್ಲಿಯೇ ಇರಿ, ಗುಂಪು ಗುಂಪಾಗಿ ಓಡಾಡುವುದು ಬೇಡ, ಇದರಿಂದ ನಿಮಗಷ್ಟೆ ಅಲ್ಲದೆ ನಿಮ್ಮ ಜೊತೆಗೆ ಇದ್ದವರಿಗೂ ಅಪಾಯ. ನಿಮ್ಮ ಕುಟುಂಬಕ್ಕೂ ಅಪಾಯ ತಪ್ಪಿದಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಹಲವು ನಟ ನಟಿಯರು ಯುಗಾದಿ ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಣೆ ಮಾಡಿ, ಅದ್ದೂರಿತನದ ಮೊರೆ ಹೋಗಬೇಡಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next