Advertisement

ಹತ್ರಾಸ್‌ ಅತ್ಯಾಚಾರ ಪ್ರಕರಣವನ್ನು ಸರಕಾರ ಮುಚ್ಚಿ ಹಾಕುವ ಕಸರತ್ತು ಮಾಡಿದೆ : ಡಿಕೆಶಿ

11:44 AM Oct 04, 2020 | sudhir |

ಹುಬ್ಬಳ್ಳಿ: ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರ ಪ್ರಕರಣವನ್ನು ಅಲ್ಲಿನ ಸರಕಾರ ಮುಚ್ಚಿ ಹಾಕುವ ಕಸರತ್ತು ನಡೆಸಿದೆ ಎಂದು ಡಿ.ಕೆ.ಶಿವಕುಮಾರ ಆರೋಪಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಯುವತಿ ಮೇಲೆ ಅತ್ಯಾಚಾರ ಆಗಿರುವ ವಿಚಾರ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಆದರೆ ಇದೀಗ ಅಂತಹ ಘಟನೆ ನಡೆದಿಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ. ದುಃಖದಲ್ಲಿದ್ದ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಬಿಡಲಿಲ್ಲವೆಂದು ಆರೋಪಿಸಿದರು.

ನಿಷೇಧಾಜ್ಞೆ ಜಾರಿ ಮಾಡಿ ಮೃತಳ ಕುಟುಂಬವನ್ನು ಬಂಧನದಲ್ಲಿಟ್ಟಿರುವುದು, ವೈದ್ಯರ ದಾಖಲೆ ತಿರುಚುವ ಕೆಲಸಕ್ಕೆ ಮುಂದಾಗಿರುವುದು, ಇಡೀ ಗ್ರಾಮವನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಿ ಪ್ರವೇಶ ನಿರ್ಬಂಧ ಹೇರಿರುವುದನ್ನು ನೋಡಿದರೆ ಯೋಗಿ ಸರಕಾರ ದೇಶಕ್ಕೆ ರೋಗ ತಂದಿದೆ ಎಂದರು.

ರಾಜ್ಯ ಸರಕಾರ ಇರುತ್ತದೆಯೋ, ಇಲ್ಲವೋ ಎಂಬ ಸಚಿವ ಆನಂದ ಸಿಂಗ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಬಿಜೆಪಿಯವರೇ ಉತ್ತರಿಸಿದರೆ ಉತ್ತಮ. ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಒಂದೊಂದೇ ವಿಷಯಗಳು ಇದೀಗ ಹೊರಗೆ ಬರುತ್ತಿವೆ.

ಮುಂದೇನು ಎಂಬುದನ್ನು ಕಾದು ನೋಡಬೇಕು. ಒಂದಂತೂ ನಿಜ. ರಾಜ್ಯ ಬಿಜೆಪಿ ಸರಕಾರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

Advertisement

ರಾಜ್ಯ ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು ಬಿಟ್ಟರೆ, ಬೇರಾವ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ಅಭ್ಯರ್ಥಿ ಇಲ್ಲ: ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಗಲಿಕೆ ತುಂಬಾ ನೋವು ತರಿಸಿದೆ. ಅವರ ಅಗಲಿಕೆಯಿಂದ ಬೆಳಗಾವಿ ಲೋಕ ಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದರೆ, ಬಿಜೆಪಿಯಿಂದ ಗೆಲ್ಲುವ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಚುನಾವಣೆ ಘೋಷಣೆ ವಿಳಂಬ ಮಾಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next