Advertisement

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

08:18 AM Sep 30, 2020 | Mithun PG |

ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಗಂಭೀರ ಗಾಯಗೊಂಡು ಐಸಿಯುಗೆ ದಾಖಲಾಗಿದ್ದು ಹತ್ರಾಸ್ ನ  19 ವರ್ಷದ ಯುವತಿ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶವದ ಅಂತ್ಯಸಂಸ್ಕಾರವನ್ನು ಪೊಲೀಸರು ತಮ್ಮ ಅನುಮತಿಯಿಲ್ಲದೆ ನೆರೆವೇರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Advertisement

ಇಂದು ಮುಂಜಾನೆ 2:45 ರ ವೇಳೆಗೆ ಪೊಲೀಸರು ಪ್ರತಿಭಟನೆಯ ನಡುವೆಯೇ ಶವದ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದ ಯುವತಿಯ ಶವವವನ್ನು ತಡರಾತ್ರಿ ಪೋಲಿಸರು ವ್ಯಾಪಕ ಪ್ರತಿಭಟನೆಯ ನಡುವೆಯೇ ಸ್ವಗ್ರಾಮಕ್ಕೆ ತಂದಿದ್ದರು.

ಆದರೇ ಮಗಳ ಶವವನ್ನು  ಹಿಂತಿರುಗಿಸುವಂತೆ ಪದೇ ಪದೇ ವಿನಂತಿಸಿದರೂ ಯುಪಿ ಪೊಲೀಸರು ಬಲವಂತವಾಗಿ ಕೊನೆಯ ವಿಧಿಗಳನ್ನು ನೆರವೇರಿಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ತಿಳಿಸಿದೆ.

ಅದಾಗ್ಯೂ ಉತ್ತರ ಪ್ರದೇಶದ ಪೋಲಿಸರು ಕುಟುಂಬದ ಇಚ್ಚೆಯಂತೆಯೇ ಅಂತ್ಯಾಸಂಸ್ಕಾರ ನೆರವೇರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಎಸಗಿ, ನಾಲಗೆ ಕತ್ತರಿಸಿ ಚಿತ್ರಹಿಂಸೆ; ಯುವತಿ ಸಾವು

Advertisement

ಘಟನೆಯ ಹಿನ್ನಲೆ:

19 ವರ್ಷದ ಯುವತಿಯನ್ನು ನಾಲ್ವರು ದುರುಳರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಮಾತ್ರವಲ್ಲದೆ  ಆಕೆಯ ನಾಲಗೆಯನ್ನು ಕತ್ತರಿಸಿ ಹಾಕಿ, ಚಿತ್ರಹಿಂಸೆ ನೀಡಿದ್ದರು. ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ನಂತರ ಆಕೆಯನ್ನು ದೆಹಲಿಗೆ ಸ್ಥಳಾಂತರಿಸಲಾಗಿತ್ತು.

ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಯುವತಿ ಹಿಂದುಳಿದ ಜಾತಿಗೆ ಸೇರಿದ್ದು, ಅತ್ಯಾಚಾರ ಎಸಗಿದ ಆರೋಪಿಗಳು ಮೇಲ್ವರ್ಗಕ್ಕೆ ಸೇರಿದವರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಪೈಶಾಚಿಕ ಅತ್ಯಾಚಾರ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆದರೇ ಯುವತಿ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next