Advertisement

ಹತ್ರಾಸ್ ಆಕ್ರೋಶ: India Gateನಲ್ಲಿ 144 ಸೆಕ್ಷನ್ ಜಾರಿ, ಪುದುಚೇರಿ CM ಉಪವಾಸ ಸತ್ಯಾಗ್ರಹ

01:01 PM Oct 02, 2020 | Mithun PG |

ನವದೆಹಲಿ: ಹತ್ರಾಸ್ ಘಟನೆಯನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಯಾಗುವ ಮುನ್ಸೂಚನೆಯಿರುವ ಕಾರಣ  ದೆಹಲಿ ಇಂಡಿಯಾ ಗೇಟ್ ನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂಡಿಯಾ ಗೇಟ್ ಸುತ್ತಮುತ್ತಲೂ  5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

Advertisement

ಅದಾಗ್ಯೂ ಜಂತರ್ ಮಂತರ್ ನಲ್ಲಿ 100 ಜನ ಸೇರುವುದಕ್ಕೆ ಅನುಮತಿ ನೀಡಿಲಾಗಿದೆ. ಹತ್ರಾಸ್ ಘಟನೆಯನ್ನು ಖಂಡಿಸಿ ನಾಗರಿಕರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಆಡಳಿತರೂಢ ಆಮ್ ಆದ್ಮಿ ಪಕ್ಷ ಇಂಡಿಯಾ ಗೇಟ್ ಬಳಿ ಇಂದು ಸಂಜೆ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು. ಇದೀಗ 144 ಸೆಕ್ಷನ್ ಜಾರಿಗೊಳಿಲಾಗಿದೆ.

ಗುರುವಾರ ಹತ್ರಾಸ್ ಅತ್ಯಾಚಾರ ಮತ್ತು ಹತ್ಯೆ ಸಂತ್ರಸ್ಥೆಯ ಕುಟುಂಬಸ್ಥರು ಭೇಟಿಯಾಗಲು ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು  ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದರು. ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ಈ ನಡೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಕಾಂಗ್ರೆಸ್ ನಾಯಕರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಮತ್ತು ಹತ್ರಾಸ್ ಸಂತ್ರಸ್ಥೆಗೆ ಸೂಕ್ತ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಪುದುಚೇರಿ ಮುಖ್ಯಂಮಂತ್ರಿ ವಿ ನಾರಾಯಣಸ್ವಾಮಿ ಇಂದು ಬೆಳಗ್ಗೆ 10 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇವರಿಗೆ ಕಾಂಗ್ರೆಸ್ ಮಂತ್ರಿಗಳು, ಶಾಸಕ ಸಂಸದರು ಕೂಡ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಯೋಗಿ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ:ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Advertisement

ಘಟನೆಯ ಕುರಿತು ಕಿಡಿಕಾರಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹತ್ರಾಸ್ ಘಟನೆ ನಿಜಕ್ಕೂ ದುರಂತಮಯ. ಸಂತ್ರಸ್ಥ ಕುಟುಂಬಸ್ಥರೊಂದಿಗೆ ಉತ್ತರಪ್ರದೇಶ ಸರ್ಕಾರ ನಡೆದುಕೊಂಡ ರೀತಿ ಅಮಾನವೀಯ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇವೆ. ಅಧಿಕಾರದಲ್ಲಿರುವ ಜನರು ತಾವು ಮಾಲೀಕರಲ್ಲ ಆದರೆ ಈ ದೇಶದ ‘ಸೇವಕರು’ ಎಂಬುದನ್ನು ಮರೆಯಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ ಗಾಜೀಯಾಬಾದ್ ವಕೀಲರ ತಂಡವೊಂದು ಉತ್ತರಪ್ರದೇಶದಲ್ಲಿ ಯೋಗಿ ಆಡಳಿತವನ್ನು ಕೊನೆಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿದೆ.  ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೂಡ ಇಂಡಿಯಾ ಗೇಟ್ ಬಳಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: “ಆತ ಯೋಗಿನೋ-ರೋಗಿನೋ” ಉ.ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next