Advertisement
ಮುಂಬೈ ಇಂಡಿಯನ್ಸ್ ಎದುರಿನ ರವಿವಾರ ರಾತ್ರಿಯ ಮುಖಾಮುಖಿಯಲ್ಲಿ ಹರ್ಷಲ್ ಪಟೇಲ್, 17ನೇ ಓವರಿನ ಮೊದಲ 3 ಎಸೆತಗಳಲ್ಲಿ ಪಾಂಡ್ಯ, ಪೊಲಾರ್ಡ್ ಮತ್ತು ರಾಹುಲ್ ಚಹರ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ಇವರ ಸಾಹಸದಿಂದ ಮುಂಬೈ ವಿರುದ್ಧ ಆರ್‌ಸಿಬಿ 54 ರನ್ನುಗಳ ಜಯಭೇರಿ ಮೊಳಗಿಸಿತು. ಉದ್ಘಾಟನಾ ಪಂದ್ಯದಲ್ಲೂ ಮುಂಬೈಯನ್ನು ಮಣಿಸುವಲ್ಲಿ ಹರ್ಷಲ್ ಪಟೇಲ್ ಪಾತ್ರ ಪ್ರಮುಖವಾಗಿತ್ತು. ಅಲ್ಲಿ ಅವರು 27 ರನ್ನಿಗೆ 5 ವಿಕೆಟ್ ಕೆಡವಿದ್ದರು.
Related Articles
ಹರ್ಯಾಣದವರಾದ ಹರ್ಷಲ್ ಪಟೇಲ್ ಪಾಲಿಗೆ ಇದು “ಫಾರ್ಮ್ ಆಫ್ ಲೈಫ್’. ಕ್ರಿಕೆಟ್ ಬಾಳ್ವೆಯಲ್ಲಿ ಅವರೆಂದೂ ಇಷ್ಟು ಎತ್ತರ ತಲುಪಿದ್ದಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಪಟೇಲ್ ಹೆಸರು ಕಾಣಿಸಿಕೊಂಡಿಲ್ಲ. ಇದಕ್ಕೆ ಅವರು ಬೇಸರಪಟ್ಟಿದ್ದಾಗಲಿ, ವಿಷಾದ ಅನುಭವಿಸಿದ್ದಾಗಲಿ ಇಲ್ಲ.
Advertisement
“ನಾನು ಯಾವತ್ತೂ ಯಾವುದಕ್ಕೂ ವಿಷಾದಿಸಿದವನಲ್ಲ. ಆಯ್ಕೆಯ ನಿರ್ಧಾರ ನನ್ನ ಕೈಲಿಲ್ಲ. ಅದು ಕ್ಲಬ್ ಕ್ರಿಕೆಟ್, ಐಪಿಎಲ್, ಹರ್ಯಾಣ ಪರ ಇರಬಹುದು ಅಥವಾ ಅಥವಾ ಮುಂದೊಂದು ದಿನ ದೇಶದ ಪರ ಆಡಲಿಳಿದಾಗಲೂ ಇರ ಬಹುದು… ಬೌಲಿಂಗ್ ಅಥವಾ ಬ್ಯಾಟಿಂಗ್ ಮೂಲಕ ಪಂದ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವುದಷ್ಟೇ ನನ್ನ ಗುರಿ’ ಎಂಬುದಾಗಿ ಪಟೇಲ್ ಹೇಳಿದರು.