ಹಾಸನದಲ್ಲಿ ಶುಕ್ರವಾರ ನಡೆಯಿತು. ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ವ್ಯವಸ್ಥೆ ಮಾಡಿದ್ದ ಹಾಸನ ವಿಧಾನಸಭಾ
ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರಗಳು, ವಿ.ವಿ.ಪ್ಯಾಟ್‌ಗಳನ್ನು ಪಡೆಯಲು ಬಂದಿದ್ದ ಮತಗಟ್ಟೆ
ಅಧ್ಯಕ್ಷಾಧಿಕಾರಿ ಮತ್ತು ಸಿಬ್ಬಂದಿ ಉಪಹಾರ, ಕುಡಿಯುವ ನೀರೂ ಇಲ್ಲದೆ ಪರದಾಡಿದರು.
Advertisement
ಬೆಳಗ್ಗೆ 8 ಗಂಟೆಯಿಂದಲೇ ಮಸ್ಟರಿಂಗ್ ಕೇಂದ್ರಕ್ಕೆ ಸಿಬ್ಬಂದಿ ಬರಲಾರಂಭಿಸಿದ್ದರು. ತಮಗೆ ನಿಗದಿಯಾದ ಮತಗಟ್ಟೆ ಮಾಹಿತಿ ಪಡೆದು ಇವಿಎಂ, ವಿ.ವಿ.ಪ್ಯಾಟ್ ಹಾಗೂ ಚುನಾವಣಾ ಸಾಮಗ್ರಿ ಪಡೆದು ಬಸ್ ಗಳಿಗಾಗಿ ಕಾಯುತ್ತಿ ಸಿಬ್ಬಂದಿಗೆ ಬೆಳಗ್ಗೆ 11.30ರ ವರೆಗೂ ಉಪಹಾರ ಸಿಗಲಿಲ್ಲ.ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಯವರನ್ನು ಸಿಬ್ಬಂದಿ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ ನಂತರ 11.30ಕ್ಕೆ ಉಪಹಾರ ಬಂದರೂ ಪ್ಲೇಟ್‌ಗಳ ಕೊರತೆ ಇತ್ತು. ಕೆಲವು ಸಿಬ್ಬಂದಿ ಪ್ಲೇಟ್‌ಗಾಗಿ ಪರದಾಡಿ ಕೊನೆಗೆ ಉಪಹಾರ ತಿಂದು ಬಿಸಾಡಿದ್ದ ಅಡಕೆ ಪ್ಲೇಟ್‌ಗಳನ್ನು ತೊಳೆದುಕೊಂಡು ಉಪಹಾರ ತಿಂದರು.
ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಮುಂಜಾನೆ 5 ಗಂಟೆಗೇ ಮನೆ ಬಿಟ್ಟು ಬಂದಿರುವ ನಮಗೆ 11.30ರ ವರೆಗೂ ಉಪಹಾರ ನೀಡಲಿಲ್ಲ. ರಕ್ತದೊತ್ತಡ, ಮಧುಮೇಹ ಇರುವ ಬಹುಪಾಲು ಸಿಬ್ಬಂದಿ ಉಪಹಾರವಿಲ್ಲದೇ ಪರದಾಡುವಂತಾಗಿದೆ. ಮಸ್ಟರಿಂಗ್ ಕೇಂದ್ರಕ್ಕೆ ಉಪಹಾರ ಸರಬರಾಜು ಮಾಡುವ ಹೊಣೆ ಹೊತ್ತವರ ನಿರ್ಲಕ್ಷ್ಯದಿಂದ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅವ್ಯವಸ್ಥೆಯ ನಡುವೆಯೇ ಇವಿಎಂ, ವಿ.ವಿ.ಪ್ಯಾಟ್ ಹಾಗೂ ಚುನಾವಣಾ ಸಾಮಗ್ರಿ ಪಡೆದು ಬಸ್‌ಗಳಲ್ಲಿ 2 ಗಂಟೆಯ ವೇಳೆಗೆ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿ ಹೊರಟರು.