Advertisement
ಶನಿವಾರ ದೇವರ ದರ್ಶನಕ್ಕೆ ತೆರೆಬಿದ್ದ ಬಳಿಕ ಭಾನುವಾರ ಬೆಳಗ್ಗೆಯಿಂದಲೇ 16 ಹುಂಡಿಗಳನ್ನು ತೆರೆದು 50 ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ಶುರುವಾಯಿತು. ಸಂಜೆ ವೇಳೆಗೆ ಹುಂಡಿಯಲ್ಲಿ ಒಂದು ಕೋಟಿಗೂ ಅಧಿಕ ಆದಾಯದ ಲೆಕ್ಕ ಸಿಕ್ಕಿದೆ. ವಿಶೇಷ ದರ್ಶನ ಮತ್ತು ನೇರ ದರ್ಶನದಿಂದ 2.72 ಕೋಟಿ ರೂ. ಸಂಗ್ರಹವಾಗಿದೆ. ಲಾಡು ಪ್ರಸಾದದ ಮಾರಾಟ, ಹರಕೆಯ ಸೀರೆಗಳ ಮಾರಾಟ ಸೇರಿ 2.98 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ ಸುರೇಶ ರಾಮಪ್ಪಎಂಬುವರ ಎಟಿಎಂ ಕಾರ್ಡ್ ಪತ್ತೆಯಾಗಿದ್ದು, ಮಾಂಗಲ್ಯ ಸರ ಮತ್ತು ಹಣವಿದ್ದ ಪರ್ಸ್ ಕೂಡ ಹುಂಡಿಗೆ ಬಿದಿ¨ªೆ ಹಾಗೂ ಒಂದು ಪ್ರೇಮ ಪತ್ರವೂ ದೊರೆತಿದೆ. ಐದು ನೂರು, ಸಾವಿರ ರೂ.ಗಳ ನಿಷೇಧಿತ ನೋಟುಗಳೂ ಹುಂಡಿಯಲ್ಲಿ ದೊರೆತಿದೆ. ಕಳೆದ ವರ್ಷ 2.65 ಕೋಟಿ ರೂ. ಆದಾಯ ಹಾಸನಾಂಬೆ ದೇವಾಲಯದಲ್ಲಿ ಸಂಗ್ರಹವಾಗಿತ್ತು. Advertisement
ಹಾಸನಾಂಬೆಗೆ ಈ ವರ್ಷ ದುಪ್ಪಟ್ಟು ಆದಾಯ
07:50 AM Oct 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.