ನ.1ರಂದು ಮಧ್ಯಾಹ್ನ ಹಾಸನಾಂಬಾ ದೇವಾಲಯದ ಬಾಗಿಲು ತೆರೆದ ನಂತರ ಕಳೆದ 8 ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂರು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಡೀಸಿ ರೋಹಿಣಿ ಸಿಂಧೂರಿ, ಎಸ್ಪಿ ಡಾ.ಎ.ಎನ್. ಪ್ರಕಾಶ್ ಗೌಡ, ಉಪಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅವರ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗಮುದ್ರೆ ಹಾಕಲಾಯಿತು. ದೇವಿ ದರ್ಶನಕ್ಕೆ ತೆರೆ ಎಳೆದ ಬಳಿಕ ದೇವಿಯ ಒಡವೆಗಳನ್ನು ಜಿಲ್ಲಾ ಖಜಾನೆಗೆ ಸಾಗಿಸಲಾಯಿತು.
Advertisement
ಮುಂದಿನ ವರ್ಷ 13 ದಿನ ದರ್ಶನ: ಪ್ರಸಕ್ತ ವರ್ಷ ದೇವಿ 9 ದಿನ ಭಕ್ತರಿಗೆ ದರ್ಶನ ನೀಡಿದ್ದರೆ, ಮುಂದಿನ ವರ್ಷ 13 ದಿನ ದರ್ಶನ ನೀಡಲಿದ್ದಾಳೆ. 2019ರ ಅಕ್ಟೋಬರ್ 17 ರಂದು ದೇವಾಲಯದ ಬಾಗಿಲು ತೆಗೆದು ಅಕ್ಟೋಬರ್ 29 ರಂದು ಬಾಗಿಲು ಮುಚ್ಚಲಿದೆ.