Advertisement

ಹಾಸನ: ಹಿಮ್ಸ್‌ಗೆ 15 ಬೋಧಕ ಹುದ್ದೆ ನೇಮಕಾತಿಗೆ ರಾಜ್ಯ ಸರ್ಕಾರದ ಸಮ್ಮತಿ

03:22 PM Sep 01, 2020 | Suhan S |

ಹಾಸನ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ನಲ್ಲಿ ಸ್ನಾತಕ ವೈದ್ಯಕೀಯ ಪದವಿ (ಎಂಬಿಬಿಎಸ್‌) 150 ಸೀಟುಗಳ ಪ್ರವೇಶಾತಿಗೆ ಪೂರಕವಾಗಿ 15 ಬೋಧಕ ಹುದ್ದೆ ಸೃಜಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಹಿಮ್ಸ್‌ ಸಲ್ಲಿಸಿರುವ ಪ್ರಸ್ತಾವನೆಯಂತೆ 25 ಬೋಧಕ ಹುದ್ದೆಗಳು, 90 ಶುಶ್ರೂಷಕರ ಹುದ್ದೆಗಳನ್ನು ಸೃಜಿಸಲು ಕೋರಲಾಗಿತ್ತು. ಆದರೆ 50 ಶುಶ್ರೂಷಕರ ಹುದ್ದೆಗಳನ್ನು ಮಾತ್ರ ಸೃಜಿಸಿ 25 ಬೋಧಕ ಹುದ್ದೆಗಳನ್ನು ಸೃಜಿಸುವುದನ್ನು ತಿರಸ್ಕರಿಸಲಾಗಿದೆ. ಇದರಿಂದ 150 ಎಂಬಿಬಿಎಸ್‌ ಸೀಟುಗಳ ಮಾನ್ಯತೆಯೇ ರದ್ದಾಗುವ ಸಾಧ್ಯತೆ ಇದೆ.

ಆದ್ದರಿಂದ 25 ಬೋಧಕ ಹುದ್ದೆಗಳ ಸೃಜಿಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕೆಂದು ಶಾಸಕ ಪ್ರೀತಂ ಜೆ.ಗೌಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿ ಆಧರಿಸಿ ಆರ್ಥೋಪೆಡಿಕ್ಸ್‌ನಲ್ಲಿ 4 ಹುದ್ದೆ, ಪೀಡಿಯಾಟ್ರಿಕ್ಸ್‌ನಲ್ಲಿ 3 ಹುದ್ದೆ, ಅನೆಸ್ತೇಷಿಯಾ 4 ಹುದ್ದೆ, ಟಿಬಿ ಅಂಡ್‌ ಚೆಸ್ಟ್‌ – 1 ಹುದ್ದೆ, ಪೆಥಾಲಜಿ 1 ಹುದ್ದೆ, ರೆಡಿಯಾಲಜಿಯಲ್ಲಿ 2 ಹುದ್ದೆಗಳ ಸೃಜಿಸಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ.

ನನ್ನ ಮನವಿ ಆಧರಿಸಿ ಹಿಮ್ಸ್‌ನಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿ ಆದೇಶ ಹೊರಡಿಸಲು ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಶಾಸಕ ಪ್ರೀತಂ ಜೆ.ಗೌಡ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next