Advertisement

ಹಾಸನ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ

07:23 AM Mar 20, 2019 | |

ಸಕಲೇಶಪುರ: ಹಾಸನದ ಲೋಕಸಭಾ ಕ್ಷೇತ್ರದ ಅಭ್ಯಥಿಯಾಗಿ ನಾನು ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ ಗಾಳಿ ಸುದ್ದಿಗಳಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹೇಳಿದರು.

Advertisement

ಮುಂಬರುವ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ತಾಲೂಕಿನ ಹಿರಿಯ ಕಾಂಗ್ರೆಸ್‌ ಮುಖಂಡರುಗಳ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ ಕಾಂಗ್ರೆಸ್‌ ಮುಖಂಡರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್‌ ಮುಖಂಡರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ.

ವಿಶ್ವಣ್ಣನವರು ನಮ್ಮ ಪಕ್ಷದಲ್ಲಿದ್ದಾಗ ನಮ್ಮ ಕುಟುಂಬದ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದರು. ಆದ್ದರಿಂದ ಅವರ ಮನೆಗೆ ಬೆಂಬಲ ಕೋರಿ ಬಂದಿದ್ದೇನೆ. ಅವರು ಪಕ್ಷದ ವರಿಷ್ಠರೊಡನೆ ಮಾತನಾಡಿ ಬೆಂಬಲ ನೀಡುವ ಹೇಳಿಕೆ ನೀಡಿದ್ದಾರೆ, ಅವರ ಸಹಾಯ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಹಾಸನದಿಂದ ಗೌಡರು ಸ್ಪರ್ಧಿಸೋಲ್ಲ: ಹಾಸನದಿಂದ ದೇವೇಗೌಡರು ನಿಲ್ಲುತ್ತಾರೆಂಬುದು ಗಾಳಿ ಸುದ್ದಿ ಹಾಸನ ಲೋಕಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದರು.

ಪ್ರಜ್ವಲ್‌ ನಮ್ಮ ಅತಿಥಿ- ವಿಶ್ವನಾಥ್‌: ಮಾಜಿ ಶಾಸಕ ಎಚ್‌.ಎಂ ವಿಶ್ವನಾಥ್‌ ಮಾತನಾಡಿ, ಪ್ರಜ್ವಲ್‌ ಅವರು ನಮ್ಮ ಮನೆಗೆ ಅತಿಥಿಯಾಗಿ ಬಂದಿದ್ದಾರೆ. ರಾಜಕೀಯ ದೃಷ್ಟಿಯಿಂದ ಅವರನ್ನು ನಾನು ನೋಡುತ್ತಿಲ್ಲ. ನಾನು ರಾಷ್ಟ್ರೀಯ ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿದ್ದೇನೆ.

Advertisement

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿದ್ದು ನಾಳೆ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಹಾಸನ ಜಿಲ್ಲೆ ಕಾಂಗ್ರೆಸ್‌ ಮುಖಂಡರ ಸಭೆ ಕರೆದಿದ್ದು ಪಕ್ಷದ ವರಿಷ್ಠರ ಸೂಚನೆಯಂತೆ ಕೆಲಸ ಮಾಡುತ್ತೇನೆ ಎಂದರು. ನನ್ನ ಅನುಯಾಯಿಗಳು ಪಕ್ಷ ತೊರೆಯುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದರು.

ಬಿಎಸ್‌ಪಿಯವರು ಬಂದು ನನ್ನನ್ನು ಗುರುತಿಸಿ ಅಭ್ಯರ್ಥಿಯಾಗುವಂತೆ ಮನವಿ ಮಾಡಿರುವುದು ಸತ್ಯ. ಅವರ ಕೋರಿಕೆ ಈಡೇರಿಸಲು ಕಷ್ಟಕರವಾಗುತ್ತದೆ ಎಂದರು. ಎ.ಮಂಜು ಅವರು ಪಕ್ಷ ತ್ಯಜಿಸುವ ಕುರಿತು ಕೇಳಿದ ಪ್ರಶ್ನೆಗೆ ಕಾಂಗ್ರೆಸ್‌ ಪಕ್ಷ ದಿಂದ ಅಧಿಕಾರ ಅನುಭವಿಸಿ ಸಂಧರ್ಭದ ಲಾಭ ಪಡೆಯಲು ಅವರು ಹೋಗಿದ್ದು ಜನ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಜಾತ್ಯತೀತ ನಿಲುವುಗಳ ಹಿನ್ನೆಲೆಯಲ್ಲಿ ನಾವು ಒಟ್ಟಾಗಿ ಹೋರಾಟ ಮಾಡಿ ಪ್ರಜ್ವಲ್‌ ರೇವಣ್ಣನವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಾನುಬಾಳ್‌ ಭಾಸ್ಕರ್‌, ಮುಖಂಡ ರಾದ ತುಳಸಿ ಪ್ರಸಾದ್‌, ಹುರುಡಿ ದೇವರಾಜ್‌, ದೇವಾಲದಕೆರೆ ಲೋಕೇಶ್‌, ಮುಸ್ಲಿಂ ಮುಖಂಡ ಶಬ್ಬೀರ್‌ ಜಾನ್‌, ಮಲ್ನಾಡ್‌ ಜಾಕೀರ್‌,

ಜಿ.ಪಂ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಲೀಂ, ಕಾಂಗ್ರೆಸ್‌ ಮುಖಂಡರಾದ ತುಳಸಿಪ್ರಸಾದ್‌, ಪುರಸಭಾ ಸದಸ್ಯರಾದ ಪ್ರಜ್ವಲ್‌, ಇಬ್ರಾಹಿಂ, ಇಸ್ರಾರ್‌, ಅನ್ನಪೂರ್ಣ ಶ್ರೀಧರ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಕೆ.ಎಲ್‌ ಸೋಮಶೇಖರ್‌, ಜೆಡಿಎಸ್‌ ಮುಖಂಡರಾದ ಸಚ್ಚಿನ್‌ ಪ್ರಸಾದ್‌, ಜಾತಹಳ್ಳಿ ಪುಟ್ಟಸ್ವಾಮಿ, ಅಸ್ಲಂ, ರಾಜೀವ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next