Advertisement

ಹಾಸನ: ಬಂಧಿಸುವ ವೇಳೆ ಆರೋಪಿಯಿಂದ ಹಲ್ಲೆಗೆ ಯತ್ನ: ಫೈರಿಂಗ್ ನಡೆಸಿದ ಪೊಲೀಸರು

07:57 AM Sep 01, 2020 | Mithun PG |

ಹಾಸನ: ಕೊಲೆ ಆರೋಪಿಯನ್ನು ಶರಣಾಗುವಂತೆ ಮನವಿ ಮಾಡಿದರೂ ಜಗ್ಗದ ಕಾರಣ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಚನ್ನರಾಯಪಟ್ಟಣ ತಾಲೂಕು ಜೋಡಿಗಟ್ಟೆ ಬಳಿ ನಡೆದಿದೆ.

Advertisement

ಮಂಗಳವಾರ ಮುಂಜಾನೆ ಕೋಳಿ ಫಾರಂ ನಲ್ಲಿ ಅಡಗಿ ಕುಳಿತಿದ್ದ ಆರೋಪಿ ಬಂಧಿಸುವ ವೇಳೆ ಈ ಘಟನೆ ನಡೆದಿದೆ.

ಪ್ರಸಾದ್ ಅಲಿಯಾಸ್ ಗುಂಡ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಶರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್. ಬಂಧಿಸಲು ಮುಂದಾದ ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.

ಪರಿಣಾಮವಾಗಿ ಇನ್ಸ್ ಪೆಕ್ಟರ್ ಎಡಗೈಗೆ ಗಾಯವಾಗಿದ್ದು, ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ನಡೆಸಿದ್ದಾರೆ. ಆರೋಪಿ ಪ್ರಸಾದ್ ಮಂಡಿ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಈತನನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾತ್ರವಲ್ಲದೆ ಇನ್ಸ್ಪೆಕ್ಟರ್ ವಿನಯ್ ಕೂಡ ಚಿಕಿತ್ಸೆಗಾಗಿ ಕಿಮ್ಸ್ ಹಾಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಹಣಕ್ಕಾಗಿ ವೃದ್ಧ ದಂಪತಿಗಳನ್ನ ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರಸಾದ್ ಅನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಆಲಗೊಂಡನಹಳ್ಳಿ ಜೋಡಿ ಕೊಲೆ ಆರೋಪದ ಮೇಲೆ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಲಾಕ್ ಡೌನ್ ಹಿನ್ನಲೆ ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಒಂದು ತಿಂಗಳ ಹಿಂದೆ ಈ ಆರೋಪಿಗಳು ಬಂದಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next