Advertisement

ಕೊಹ್ಲಿ ದಾಖಲೆ ಮುರಿದ ಆಮ್ಲ

12:30 AM Jan 21, 2019 | |

ಪೋರ್ಟ್‌ ಎಲಿಜಬೆತ್‌: ಪಾಕಿಸ್ಥಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹಾಶಿಮ್‌ ಆಮ್ಲ ಬಾರಿಸಿದ 27ನೇ ಶತಕ ವ್ಯರ್ಥವಾಗಿರಬಹುದು, ಆದರೆ ಈ ಸಾಧನೆಯ ವೇಳೆ ಅವರು ನೂತನ ದಾಖಲೆಯೊಂದನ್ನು ನಿರ್ಮಿಸಿ ಸುದ್ದಿಯಾದರು. ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27 ಶತಕ ಹೊಡೆದ ವಿರಾಟ್‌ ಕೊಹ್ಲಿ ದಾಖಲೆಯನ್ನು ಆಮ್ಲ ಮುರಿದರು.

Advertisement

ಹಾಶಿಮ್‌ ಆಮ್ಲ 27 ಶತಕಕ್ಕೆ 167 ಇನ್ನಿಂಗ್ಸ್‌ ತೆಗೆದುಕೊಂಡರು. ಅಂದರೆ ಇದು ಕೊಹ್ಲಿಗಿಂತ 2 ಇನ್ನಿಂಗ್ಸ್‌ ಕಡಿಮೆ. ಉಳಿದಂತೆ 27 ಶತಕಕ್ಕಾಗಿ ಸಚಿನ್‌ ತೆಂಡುಲ್ಕರ್‌ 254 ಇನ್ನಿಂಗ್ಸ್‌, ರಿಕಿ ಪಾಂಟಿಂಗ್‌ 308 ಇನ್ನಿಂಗ್ಸ್‌, ಸನತ್‌ ಜಯಸೂರ್ಯ 404 ಇನ್ನಿಂಗ್ಸ್‌ ತೆಗೆದುಕೊಂಡಿದ್ದಾರೆ.

ಹಾಶಿಮ್‌ ಆಮ್ಲ ಏಕದಿನ ಕ್ರಿಕೆಟ್‌ನಲ್ಲಿ 27 ಶತಕ ಬಾರಿಸಿದ ವಿಶ್ವದ ಕೇವಲ 5ನೇ ಕ್ರಿಕೆಟಿಗ. ಇವರಿಗಿಂತ ಮುಂದಿರುವವರೆಂದರೆ ತೆಂಡುಲ್ಕರ್‌ (49), ಕೊಹ್ಲಿ (39), ಪಾಂಟಿಂಗ್‌ (30) ಮತ್ತು ಜಯಸೂರ್ಯ (28).

Advertisement

Udayavani is now on Telegram. Click here to join our channel and stay updated with the latest news.

Next