Advertisement

ಏಕದಿನಕ್ಕೆ ಮರಳಿದ ಆಮ್ಲ, ಡ್ಯುಮಿನಿ

12:30 AM Mar 12, 2019 | Team Udayavani |

ಜೊಹಾನ್ಸ್‌ಬರ್ಗ್‌: ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ 2 ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೆಲವು ಬದಲಾವಣೆ ಗೋಚರಿಸಿದೆ. ಐಡನ್‌ ಮಾರ್ಕ್‌ರಮ್‌, ಹಾಶಿಮ್‌ ಆಮ್ಲ ಮತ್ತು ಜೀನ್‌ಪಾಲ್‌ ಡ್ಯುಮಿನಿ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಸರಣಿಯ ಮೊದಲ ಮೂರೂ ಪಂದ್ಯಗಳನ್ನು ಗೆದ್ದ ಹರಿಣಗಳ ಪಡೆ 3-0 ಓಟ ಬೆಳೆಸಿದೆ. ಈ ಪಂದ್ಯಗಳಲ್ಲಿ ಅಷ್ಟೇನೂ ಗಮನ ಸೆಳೆಯದ ರೀಝ ಹೆಂಡ್ರಿಕ್ಸ್‌, ವಿಯಾನ್‌ ಮುಲ್ಡರ್‌ ಅವರನ್ನು ಕೈಬಿಡಲಾಗಿದೆ.

ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್‌ (ನಾಯಕ), ಹಾಶಿಮ್‌ ಆಮ್ಲ, ಕ್ವಿಂಟನ್‌ ಡಿ ಕಾಕ್‌, ಜೆಪಿ ಡ್ಯುಮಿನಿ, ಇಮ್ರಾನ್‌ ತಾಹಿರ್‌, ಐಡನ್‌ ಮಾರ್ಕ್‌ರಮ್‌, ಡೇವಿಡ್‌ ಮಿಲ್ಲರ್‌, ಲುಂಗಿಸಾನಿ ಎನ್‌ಗಿಡಿ, ಅನ್ರಿಚ್‌ ನೋರ್ಜೆ, ಆ್ಯಂಡಿಲ್‌ ಫೆಲುಕ್ವಾಯೊ, ಡ್ವೇನ್‌ ಪ್ರಿಟೋರಿಯಸ್‌, ಕಾಗಿಸೊ ರಬಾಡ, ತಬ್ರೈಜ್‌ ಶಮಿ, ಡೇಲ್‌ ಸ್ಟೇನ್‌, ರಸ್ಸಿ ವಾನ್‌ ಡರ್‌ ಡುಸೆನ್‌.

Advertisement

Udayavani is now on Telegram. Click here to join our channel and stay updated with the latest news.

Next