Advertisement

ಹಾಸನ: ಅಪ್ಪನ ಹಣ ಕದ್ದು ಪೊಲೀಸರ ಅತಿಥಿಯಾದ ಮಗ

03:25 PM Apr 30, 2022 | Team Udayavani |

ಹಾಸನ: ಅಪ್ಪನ ಮನೆಯಲ್ಲಿ ಮಗನೆ ಕಳ್ಳತನ ಮಾಡಿ ಪೊಲೀಸ್‌ ಬಲೆಗೆ ಸಿಕ್ಕಿಬಿದ್ದು ಆರೋಪಿಯಿಂದ 13,20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ ತಿಳಿಸಿದರು.

Advertisement

ನಗರದ ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಗ್ರಾಮಾಂತರ ಪೊಲೀಸ್‌ ಕಾರ್ಯಚರಣೆಯಲ್ಲಿ ಮನೆಯ ಬೀಗ ಮುರಿದು ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ ತನಿಖೆ ಮಾಡಿ ದಾಗ ಆತನಿಂದ ಕಳವು ಆಗಿದ್ದ 13,20 ಲಕ್ಷ ನಗದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಏ.22ರಂದು ಹಾಸನ ತಾಲೂಕು, ದೊಡ್ಡಾಲದಹಳ್ಳಿ ಗ್ರಾಮದ ಡಿ.ಕೆ. ರಂಗಸ್ವಾಮಿ ಅವರ 14 ಗುಂಟೆ ಜಮೀನು ಯಗಚಿ ನೀರಾವರಿ ಯೋಜನೆಯ ನಾಲೆ ನಿರ್ಮಾಕ್ಕೆ ಸ್ವಾಧೀನವಾಗಿತ್ತು. ಭೂ ಸ್ವಾಧೀನದ ಪರಿಹಾರದ ಮೊತ್ರ 13,20 ಲಕ್ಷ ರೂ.ಗಳನ್ನು ಕೌಶಿಕ ಗ್ರಾಮದ ಕರ್ನಾಟಕ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಮನೆಯ ಬೀರುವನಲ್ಲಿಟ್ಟಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ರಂಗಸ್ವಾಮಿ ಅವರು ಮನೆಗೆ ಬೀಗ ಹಾಕಿಕೊಂಡು ದನಗಳನ್ನು ಮೇಯಿಸಲು ಗ್ರಾಮದ ಕೆರೆಯ ಹತ್ತಿರ ಹೋಗಿ ಸಂಜೆ ವಾಪಸ್‌ ಮನೆಗೆ ಬರುವ ವೇಳೆಗೆ ಮನೆಯ ಬೀಗ ಮುರಿದು ಒಳನುಗ್ಗಿ 13.20 ಲಕ್ಷ ರೂ.ಗಳನ್ನು ಕಳವು ಮಾಡ ಲಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀ ಸರು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದರು.

ಪೊಲೀಸರ ಆತಿಥ್ಯಕ್ಕೆ ಸತ್ಯ ಕಕ್ಕಿದ: ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಹಾಸನ ಗ್ರಾಮಾಂತರ ಠಾಣೆ ಇನ್‌ಸ್ಟೆಕ್ಟರ್‌ ಅರೋಕಿಯಪ್ಪ ಅವರ ನೇತೃತ್ವದಲ್ಲಿ ನೇಮಕವಾಗಿದ್ದ ವಿಶೇಷ ಪೊಲೀಸ್‌ ತಂಡವು ಮಾಹಿತಿ ಆಧರಿಸಿ ಹಾಸನದ ರಾಜಘಟ್ಟ ಬಡಾವಣೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಅವರ ಮಗ ರಂಗನಾಥ (38) ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅಪ್ಪ ಮನೆಯಲ್ಲಿ ಹಣ ಇಟ್ಟಿದ್ದ ಮಾಹಿತಿ ಪಡೆದು ಕಳವು ಮಾಡಿರುವುದಾಗಿ ರಂಗನಾಥ ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ್ದ ಮೊತ್ತವನ್ನು ಆರೋಪಿ ರಂಗನಾಥನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಣ ಪಾಲಾಗುವುದೆಂದು ಕಳವು: ರಂಗಸ್ವಾಮಿ ಅವರಿಗೆ ಮೂವರು ಮಕ್ಕಳಿದ್ದು, ಭೂ ಪರಿಹಾರದ ಮೊತ್ತವನ್ನು ಮೂವರು ಮಕ್ಕಳಿಗೂ ಹಂಚಬಹುದು ಎಂದು ಭಾವಿಸಿ ಮೊದಲ ಮಗ ರಂಗನಾಥನ ಕಳವು ಮಾಡಿದ್ದ. ಆರೋಪಿ ರಂಗನಾಥ 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಹಾಸನದ ರಾಜಘಟ್ಟದಲ್ಲಿ ವಾಸವಾಗಿದ್ದ. ತನ್ನ ಸಹೋದರರಿಗೆ ಪಾಲು ಕೊಡಬಹುದು ಎಂದು ಮನೆಯಲ್ಲಿಟ್ಟಿದ್ದ ಹಣ ರಂಗನಾಥ ಕಳವು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ ಎಂದು ಎಸ್ಪಿ ಶ್ರೀನಿವಾಸಗೌಡ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next