Advertisement
ನಗರದಲ್ಲಿ ಗಾಂಜಾ ಪ್ರಕರಣಗಳ ಕುರಿತಂತೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್.ಶ್ರೀನಿವಾಸಗೌಡ ಮಾಹಿತಿ ನೀಡಿ, ಇದುವರೆಗಿನ ಗಾಂಜಾ ಪ್ರಕರಣಗಳಲ್ಲಿನ ಆರೋಪಿಗಳಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಜಿಲ್ಲೆಯಲ್ಲಿ ಗಾಂಜಾಬೆಳೆಯುತ್ತಿರುವವರು ಹಾಗೂ ಮಾರಾಟಗಾರರಿಗೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಂಟಿರುವುದು ದೃಢಪಟ್ಟಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 2016ರಲ್ಲಿ ಗಾಂಜಾ ಪ್ರಕರಣ ಕೇವಲ ಒಂದು ಪ್ರಕರಣ ದಾಖಲಾಗಿದ್ದು 2017ರಲ್ಲಿ 6 ಪ್ರಕರಣ, 2018ರಲ್ಲಿ9 ಪ್ರಕರಣ,2019ರಲ್ಲಿ7ಪ್ರಕರಣ ದಾಖಲಾಗಿದ್ದರೆ, 2010ರಲ್ಲಿ ಈವರೆಗೆ 19 ಪ್ರಕರಣಗಳಲ್ಲಿ 30 ಕೆ.ಜಿ. ಗಾಂಜಾ
ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು, ಸೆಪ್ಟೆಂಬರ್‌ನಲ್ಲಿಯೇ 11 ಪ್ರಕರಣಗಳಲ್ಲಿ 18 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಬಕಾರಿ, ಅರಣ್ಯ ಇಲಾಖೆ ಸಹಕಾರ: ಜಿಲ್ಲೆಯಲ್ಲಿ ಆಲೂರು, ಅರಕಲಗೂಡು,ಕೊಣನೂರು, ಬೇಲೂರು ತಾಲೂಕು ಅರೇಹಳ್ಳಿ, ಅರಸೀಕೆರೆ ತಾಲೂಕು ಜಾವಗಲ್, ಬಾಣಾವರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಬೆಳೆದಿರುವ ಪ್ರಕರಣಗಳು
ಪತ್ತೆಯಾಗಿವೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಬುಡ ಸಹಿತ ಕಿತ್ತು ಹಾಕಲು, ಅಬಕಾರಿ ಮತ್ತು ಅರಣ್ಯ ಇಲಾಖೆ ಸಹಕಾರ ಪಡೆಯಲಾಗುತ್ತಿದೆ ಎಂದು ಹೇಳಿದರು.
Related Articles
ಎಂದು ಸಲಹೆ ನೀಡಿದರು.
Advertisement
ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಸೆರೆ ಅರಸೀಕೆರೆ: ನಗರದ ಜೇನುಕಲ್ ಕ್ರೀಡಾಂಗಣ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ನಗರ ಇನ್ಸ್‌ಪೆಕ್ಟರ್ ಬಿ. ಚಂದ್ರಶೇಖರಯ್ಯ ನೇತೃತ್ವದ ತಂಡ ಬಂಧಿಸಿದೆ. ಜೇನುಕಲ್ ನಗರ ನಿವಾಸಿಗಳಾದ ಸೈಪುಲ್ಲಾ ಖಾನ್, (20) ಸುಲ್ತಾನ್ (21), ಇಬ್ರಾಹಿಂ (20) ಬಂಧಿತರು. ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು, 150 ಗ್ರಾಂ ತೂಕದ ಗಾಂಜಾ ಜೊತೆ ಆರೋಪಿಗಳನ್ನು ಬಂಧಿಸಿದ್ದಾರೆ. ತಹಶೀಲ್ದಾರ್ ಸಂತೋಷ್ ಕುಮಾರ್, ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ವಾಮಿ ನಾಯ್ಕ, ಸ್ಥಳೀಯ ಸತ್ತರ್ ಅವರ ಸಮಾಕ್ಷಮ ಮಹಜರ್ ನಡೆಸಿ, ಬಂಧಿತ
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ದಾಳಿ ವೇಳೆ ಪೊಲೀಸ್ ಸಿಬ್ಬಂದಿ ಮಂಜೇಗೌಡ, ಕೀರ್ತಿ ಕುಮಾರ್ ಇದ್ದರು.