Advertisement
ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ಮುಖ್ಯಮಂತ್ರಿ ಘೋಷಿಸಿರುವ ಪರಿಹಾರದ ಪ್ಯಾಕೇಜ್‌ಫಲಾನುಭವಿಗಳಿಗೆ ಇನ್ನೂ ತಲಪಿಲ್ಲ. ಕೊರೊನಾನಿರ್ವಹಣೆಗೆ ಗ್ರಾಪಂಗಳಿಗೆ 50 ಸಾವಿರ ರೂ.ಬಿಡುಗಡೆಮಾಡಿರುವುದಾಗಿ ಸಿಎಂ ಘೋಷಿಸಿದ್ದರೂ ಹಣ ಇದುವರೆಗೂ ತಲುಪಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂಸಿಎಂ ಜನರ ಕಣ್ಣೊರೆಸಲು ಪರಿಹಾರದ ಪ್ಯಾಕೇಜ್‌ಘೋಷಣೆ ಮಾಡಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿಗತಿಬಗ್ಗೆ ಜನರಿಗೆ ತಿಳಿಯಬೇಕಾಗಿದೆ.
Related Articles
Advertisement
ಶಿವಮೊಗ್ಗದ ಮಾದರಿ ಹಾಸನ ಏರ್ಪೋರ್ಟ್ನಿರ್ಮಿಸಿ: ಶಿವಮೊಗ್ಗದ ವಿಮಾನ ನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನ ನಿಲ್ದಾಣವನ್ನೂ ನಿರ್ಮಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 1250 ಕೋಟಿರೂ. ಯೋಜನೆ ರೂಪಿಸಿ ಟೆಂಡರ್ ಕರೆಯುವ ಸಿದ್ಧತೆಮಾಡಿದ್ದೆ. ಕಳೆದ2ವರ್ಷಗಳಿಂದ ಬಿಜೆಪಿ ಸರ್ಕಾರ ಈಯೋಜನೆ ತಡೆ ಹಿಡಿದಿತ್ತು. ಈಗ ಸಿಎಂ ಖುದ್ದಾಗಿವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಾಗಿಹೇಳಿರುವುದು ಸ್ವಾಗತಾರ್ಹ. ಶಿವಮೊಗ್ಗದ ವಿಮಾನನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನನಿಲ್ದಾಣ ನಿರ್ಮಾಣ ಆಗಬೇಕು ಎಂಬುದು ನಮ್ಮಒತ್ತಾಯ.
ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಶಂಕುಸ್ಥಾಪನೆ ನೆರವೇರಿಸಿ ಭೂಮಿಪೂಜೆ ಮಾಡಿದಾರೆ. ª ಹೀಗಾಗಿ ಈಗ ಶಂಕುಸ್ಥಾಪನೆಮಾಡುವ ಅಗತ್ಯವಿಲ್ಲ. ತ್ವರಿತವಾಗಿ ಕಾಮಗಾರಿಆರಂಭಿಸಲಿ ಎಂದು ಒತ್ತಾಯಿಸಿದರು.