Advertisement
ಆನಂತರ ಚುನಾವಣೆಅಧಿಸೂಚನೆ ಹೊರಬೀಳಲಿದ್ದು, ಚುನಾವಣೆಗೆ ಇನ್ನೂ9 ತಿಂಗಳಿದ್ದು, ಈಗಾಗಲೇ ಸ್ಪರ್ಧಾಕಾಂಕ್ಷಿಗಳು ತಮ್ಮಪಕ್ಷದಿಂದ ಟಿಕೆಟ್ ಪಡೆಯಲು ಮುಖಂಡರ ಭೇಟಿಹಾಗೂ ಪದವೀಧರರನ್ನು ಮತದಾರರನ್ನಾಗಿನೋಂದಣಿಯ ಚಟುವಟಕೆ ಆರಂಭಿಸಿದ್ದಾರೆ.ಕಳೆದ ಮೂರು ದಶಕಗಳಿಂದ ಬಿಜೆಪಿ ಮತ್ತುಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದು,ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ರಾಜಕಾರಣಿಗಳು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಪಾರಮ್ಯಸಾಧಿಸುತ್ತಾ ಬಂದಿದ್ದಾರೆ.
Related Articles
Advertisement
ಈ ಮೂವರೂ ಮಂಡ್ಯಜಿಲ್ಲೆಯವರು. ಜಯರಾಂ ಕಿಲಾರ ಅವರು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಬೆಂಬಲದೊಂದಿಗೆ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ರಾಮು ಅವರೂ ಶ್ರೀಕಂಠೇಗೌಡ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ.ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಜೆಡಿಎಸ್‌ಪ್ರಬಲವಾಗಿರುವುದರಿಂದ ಹೆಚ್ಚು ಜೆಡಿಎಸ್ ಶಾಸಕರೂಇರುವುದರಿಂದ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ಇದೆ.ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯಡಾ.ಇ.ಸಿ.ನಿಂಗರಾಜೇಗೌಡ ಅವರು ಈಗಾಗಲೇ ತಮ್ಮಬೆಂಬಲಿಗರ ಸಭೆ ನಡೆಸಿ ಮತದಾರರ ನೋಂದಣಿಆರಂಭಿಸಿದ್ದಾರೆ. ನಿಂಗರಾಜೇಗೌಡ ಅವರ ಜತೆಗೆಬಿಜೆಪಿ ಟಿಕೆಟ್‌ಗಾಗಿ ವಿಧಾನ ಪರಿಷತ್ ಮಾಜಿ ಸದಸ್ಯಮೈಸೂರಿನ ಜಿ.ಎಸ್. ಮಧುಸೂದನ್, ರವಿಶಂಕರ್,ಡಾ.ಚಂದ್ರಶೇಖರ್, ಅರಸೀಕೆರೆಯ ವಿನಯ್ ಅವರೂಪೈಪೋಟಿ ನಡೆಸಿದ್ದಾರೆ.
ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯಮಂಡ್ಯದ ಮಧು ಮಾದೇಗೌಡ, ಬನ್ನೂರಿನರವಿಕೃಷ್ಣೇಗೌಡ ಅವರೂ ಆಕಾಂಕ್ಷಿಗಳಾಗಿದ್ದಾರೆ.ಚುನಾವಣೆ ವೇಳೆಗೆ ಮೂರು ಪಕ್ಷಗಳಲ್ಲೂಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಲೂಬಹುದು.
ಎನ್. ನಂಜುಂಡೇಗೌಡ