ಹಾಸನ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಜು.26ಕ್ಕೆ ಎರಡು ವರ್ಷ ಪೂರೈಸಿದೆ. ಈ ಎರಡು ವರ್ಷಗಳಲ್ಲಿ ಹಾಸನಜಿಲ್ಲೆಗೆ ಗುರುತಿಸುವಂತಹ ಅಭಿವೃದ್ಧಿ ಯೋಜನೆಗಳು ಮಂಜೂರಾಗಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ 14 ತಿಂಗಳಲ್ಲಿ ಮಂಜೂರಾಗಿದ್ದ ಕೆಲವುಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೂ ಅಡ್ಡಿಯಾಗಿಲ್ಲ.
ಮಹತ್ವದ ಯೋಜನೆಗಳಿಗೆ ಅನುಮೋದನೆ: ಕುಮಾರಸ್ವಾಮಿಸಿಎಂ ಆಗಿದ್ದಾಗ ಜಿಲ್ಲೆಗೆ ಮಂಜೂರಾಗಿದ್ದ ಹಲವುಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರಅಧಿಕಾರಕ್ಕೆ ಬಂದ ತಕ್ಷಣ ತಡೆ ಹಿಡಿಯಿತು.ಸರ್ಕಾರದ ಮೇಲೆ ನಿರಂತರ ಒತ್ತಡ ತಂದು,ಹೋರಾಡಿ ಅನುಮೋದನೆ ಪಡೆಯಲು ಜಿಲ್ಲೆಯ ಶಾಸಕರು ಹೆಣಗಾಡಿದರು. ಕೊನೆಗೂ ಕೆಲವುಮಹತ್ವದ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.
ಆಡಳಿತಾತ್ಮಕ ಅನುಮೋದನೆ: ಹಾಸನ ವಿಮಾನನಿಲ್ದಾಣ ನಿರ್ಮಾಣದ 191 ಕೋಟಿ ರೂ.ಯೋಜನೆಗೆ ತಿಂಗಳಹಿಂದೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಬೇಲೂರು ತಾಲೂಕು ಹಳೆಬೀಡು, ಮಾದಿಹಳ್ಳಿ ಹೋಬಳಿಗಳಕೆರೆಗಳಿಗೆ ನೀರು ತುಂಬಿಸುವ 128 ಕೋಟಿ ರೂ.ಅಂದಾಜಿನರಣಘಟ್ಟ ಯೋಜನೆಗೆ ಮೂರು ದಿನಗಳ ಹಿಂದೆಯಷ್ಟೇ ಟೆಂಡರ್‌ಪ್ರಕ್ರಿಯೆ ಆರಂಭಿಸಲು ಕಾವೇರಿ ನೀರಾವರಿ ನಿಗಮದ ಆಡಳಿತಮಂಡಳಿ ಸಭೆ ಅನು ಮೋದನೆ ನೀಡಿದೆ. ಈ ಎರಡೂಯೋಜನೆಗಳು ಎಚ್. ಡಿ. ಕುಮಾರಸ್ವಾಮಿ ನೇತೃತ್ವದಸರ್ಕಾರದಲ್ಲೇ ಮಂಜೂರಾಗಿದ್ದವು. ಯಡಿಯೂರಪ್ಪ ಸರ್ಕಾರತಡೆ ಹಿಡಿದಿತ್ತು. ಈಗ ಆಡಳಿತಾತ್ಕಕ ಅನುಮೋದನೆ ಸಿಕ್ಕಿದೆ.ಹಾಸನದಲ್ಲಿ ತಾಂತ್ರಿಕ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಜೆಟ್‌ನಲ್ಲಿಯೇಘೋಷಣೆ ಮಾಡಿದರು.
ಆದರೆ, ಆ ಯೋಜನೆ ರೂಪುಗೊಳ್ಳಲೇಇಲ್ಲ.ಕಾಲೇಜು ಪ್ರಾರಂಭವಾಗಿಲ್ಲ: ಹಾಸನ ತಾಲೂಕು ಸೋಮನಹಳ್ಳಿಕಾವಲು ತೋಟಗಾರಿಕಾ ಕೇಂದ್ರದಲ್ಲಿ ತೋಟಗಾರಿಕಾ ಕಾಲೇಜುಆರಂಭಕ್ಕೆ ಎಚ್‌ಡಿಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಈವರೆಗೂ ಕಾಲೇಜು ಪ್ರಾರಂಭವಾಗಿಲ್ಲ.ಕಾಮಗಾರಿ ಸ್ಥಗಿತ: ಅರಸೀಕೆರೆ ಸರ್ಕಾರಿ ಎಂಜಿನಿಯರಿಂಗ್‌ಕಾಲೇಜು ನಿರ್ಮಾಣ ಒಂದು ವರ್ಷದ ಹಿಂದೆಆರಂಭವಾಯಿತಾ ದರೂ ಸ್ಥಳ ಆಯ್ಕೆಯ ವಿವಾದದಿಂದಕಾಮಗಾರಿ ಸ್ಥಗಿತವಾಗಿದೆ.
ಅನುಷ್ಠಾನವಾಗಲಿಲ್ಲ: ಹಾಸನದ ಚನ್ನಪಟ್ಟಣ ಕೆರೆಅಭಿವೃದ್ಧಿ ಮತ್ತು ಸೌಂದಯಿìàಕರಣದ 144 ಕೋಟಿರೂ. ಯೋಜನೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ಯೋಜನೆ ಅನುಷ್ಠಾನವಾಗದೆ ಹಳ್ಳ ಹಿಡಿಯಿತು.ಕಾಚೇನಹಳ್ಳಿ ಏತ ನೀರಾವರಿ 3ನೇ ಹಂತದ 185 ಕೋಟಿರೂ. ಯೋಜನೆ ಮಂಜೂರಾತಿಗಷ್ಟೇ ಸೀಮಿತ ವಾಗಿದ್ದು,ಎರಡು ವರ್ಷಗಳಿಂದ ಟೆಂಡರ್ ಪ್ರಕ್ರಿ ಯೆಗೂಅನುಮೋದನೆ ಸಿಕ್ಕಿಲ್ಲ. ಹಾಸನ ಜಿಲ್ಲಾ ಕಚೇರಿ ಸಂಕೀರ್ಣ,ಹಾಸನ ತಾಲೂಕು ಕಚೇರಿಯ ಹೊಸ ಕಟ್ಟಡಗಳ ನಿರ್ಮಾಣದತಲಾ 10 ಕೋಟಿ ರೂ. ಯೋಜನೆಗಳು ಟೆಂಡರ್ ಪ್ರಕ್ರಿಯೆಹಂತದಲ್ಲಿವೆ. ಹೀಗೆ ಹಲವು ಮಹತ್ವದ ಯೋಜನೆಗಳು ಸಮ್ಮಿಶ್ರಸರ್ಕಾರದಲ್ಲಿ ಮಂಜೂರಾಗಿದ್ದು, ಅವುಗಳು ಈಗ ಅನುಷ್ಠಾನದಹಂತದಲ್ಲಿವೆ.
ಎನ್.ನಂಜುಂಡೇಗೌಡ