Advertisement

ಪ್ರತಿ ಗ್ರಾಪಂಗೆ ಕೆಪಿಎಸ್‌ ಶಾಲೆ ತೆರೆಯಲಿ: ರೇವಣ್ಣ

07:42 PM Jul 07, 2021 | Team Udayavani |

ಹಾಸನ: ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲೂಒಂದೊಂದು ಕರ್ನಾಟಕಪಬ್ಲಿಕ್‌ ಸ್ಕೂಲ್‌ ( ಕೆಪಿಎಸ್‌)ಗಳನ್ನು ತೆರೆ ಯಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿಸಚಿವ ಎಚ್‌.ಡಿ.ರೇವಣ್ಣಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಈಗಿರುವ ಕೆಪಿಎಸ್‌ ಶಾಲೆಗಳುಉತ್ತಮವಾಗಿ ನಡೆಯುತ್ತಿದ್ದು, ಖಾಸಗಿಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆಪೈಪೋಟಿ ನೀಡುತ್ತಿವೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಗುಣಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣನೀಡಲು ಕರ್ನಾಟಕ ಪಬ್ಲಿಕ್‌ಶಾಲೆಗಳನ್ನು ತೆರೆಯಬೇಕುಎಂದರು.ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕೆಪಿಎಸ್‌ ಶಾಲೆಗಳನ್ನುತೆರೆದರು.

1000 ಸರ್ಕಾರಿ ಪಿ.ಯು.ಕಾಲೇಜು,50 ಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಿಗೆ ಮಂಜೂರಾತಿನೀಡಿದ್ದರು ಎಂದ ಅವರು, ಶಾಲೆಗಳಿಗೆಶಿಕ್ಷಕರು, ಕಾಲೇಜುಗಳಿಗೆ ಉಪನ್ಯಾಸಕರನೇಮಕಾತಿ ಮಾಡಲು ಸರ್ಕಾರಹಿಂದೇಟು ಹಾಕುತ್ತಿರುವುದು ಶೋಚನೀಯ. ತಕ್ಷಣವೇ ಸರ್ಕಾರ ಖಾಲಿಇರುವ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next