Advertisement

ಎಪಿಎಂಸಿ ದುರ್ಬಲಗೊಳಿಸೋದು ಸರಿಯಲ್ಲ : ಎಚ್‌.ಕೆ.ಕುಮಾರಸ್ವಾಮಿ

08:38 PM Jul 04, 2021 | Team Udayavani |

ಸಕಲೇಶಪುರ: ರೈತರ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ರೈತಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಮಾರುಕಟ್ಟೆ ಸಮಿತಿವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ರೈತ ಭವನ,ಹೋಟೆಲ್‌ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಲು ಹಾಗೂ ರೈತರು ಸಣ್ಣಪುಟ್ಟ ಕಾರ್ಯಕ್ರಮ ಮಾಡಿಕೊಳ್ಳಲು ರೈತಭವನವನ್ನು ಸುಮಾರು 72 ಲಕ್ಷ ರೂ. ವೆಚ್ಚದಲ್ಲಿನಿರ್ಮಾಣ ಮಾಡಲಾಗುತ್ತಿದೆ. ರೈತ ಭವನದ ಜತೆ ಹೋಟೆಲ್‌ಕಟ್ಟಡವನ್ನೂ ನಿರ್ಮಾಣ ಮಾಡಲಾಗುತ್ತಿದ್ದು ಇದರಿಂದ ಎಪಿಎಂಸಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಸರ್ಕಾರ ಕಾಯಿದೆ ತರುವ ಮುಖಾಂತರ ರೈತರಿಗೆ ಅನುಕೂಲಮಾಡಿಕೊಡಬೇಕು. ಆದರೆ, ಕೇಂದ್ರ ಸರ್ಕಾರ – ರಾಜ್ಯ ಸರ್ಕಾರ ರೈತರಿಗೆ ಬೆನ್ನುಲು ಬಾಗಿದ್ದಕೃಷಿ ಮಾರುಕಟ್ಟೆಯನ್ನು ದುರ್ಬಲಗೊಳಿಸುತ್ತಿದೆ. ಈ ಹಿನ್ನೆಲೆ ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆಸಮಿತಿ ಕಾಯಿದೆಯನ್ನು ಈ ಹಿಂದಿನಂತೆ ಪುನರ್‌ ತರಬೇಕು ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕವನ್‌ಗೌಡ,ಎಪಿಎಂಸಿ ಸದಸ್ಯರಾದ ಗಗನ್‌, ನಾಮನಿರ್ದೇಶಿತ ಸದಸ್ಯಷಣ್ಮುಖ, ಜೆಡಿಎಸ್‌ ಮುಖಂಡರಾದ ಕೆ.ಎಲ್‌.ಸೋಮಶೇಖರ್‌,ಸ.ಭಾ.ಭಾಸ್ಕರ್‌, ಹೆತ್ತೂರುಎಪಿಎಂಸಿ ಮಾಜಿ ಸದಸ್ಯ ಮಲ್ಲೇಶ್‌,ಹೆತ್ತೂರು ಗ್ರಾಪಂಮಾಜಿಅಧ್ಯಕ್ಷಕೃಷ್ಣಪ್ಪ,ಎಪಿಎಂಸಿ ಕಾರ್ಯದರ್ಶಿಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next