Advertisement
ವಿಶ್ವ ವಿಖ್ಯಾತ ಬೇಲೂರು, ಹಳೆಬೀಡು, ಶ್ರವಣಬೆಳಗೊಳದ ಶಿಲ್ಪಕಲಾ ವೈಭವದ ಜೊತೆಗೆಕೋರಮಂಗಲ, ಜಾವಗಲ್, ಮೊಸಳೆ ಗ್ರಾಮ, ರಾಮನಾಥಪುರ ಮತ್ತಿತರ ಗ್ರಾಮಗಳಲ್ಲಿ ಅದ್ಭುತ ಶಿಲ್ಪಕಲೆಯ ಸಿರಿಯ ದೇಗುಲಗಳಿವೆ. ಜೊತೆಗೆ ಬೇಲೂರಿನ ಯಗಚಿಹಾಗೂ ಹಾಸನ ತಾಲೂಕಿನ ಹೇಮಾವತಿ ಡ್ಯಾಂ ಬಳಿ ಉದ್ಯಾನವನ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ವಿಫುಲ ಅವಕಾಶಗಳಿವೆ. ಆದರೆ, ಆ ನಿಟ್ಟಿನಲ್ಲಿ ಯೋಜನೆಗಳು ರೂಪಗೊಂಡರೂ ಅನುದಾನದಕೊತೆಯಿಂದ ಅನುಷ್ಠಾನಗೊಂಡಿಲ್ಲ. ಮಾ.4ರಂದು ಸಿಎಂ ಬೊಮ್ಮಾಯಿ ಮಂಡಿಸಲಿರುವ ಬಜೆಟ್‌ನಲ್ಲಿ ಈಯೋಜನೆಗಳು ಘೋಷಣೆ ಆಗಬಹುದೆಂಬ ನಿರೀಕ್ಷೆ ಗರಿಗೆದರಿದೆ.
Related Articles
Advertisement
ಮೂಲ ಸೌಕರ್ಯಕ್ಕೆ ರಸ್ತೆ ಪೂರಕ: ಸಕಲೇಶಪುರ (ದೋಣಿಗಾಲ್) – ಮಡಿಕೇರಿ ನಡುವಿನ 95 ಕಿ.ಮೀ.
ರಸ್ತೆ ಅಭಿವೃದ್ಧಿಗೆ ಡಿಪಿಆರ್ ಸಿದ್ಧಗೊಂಡಿದೆ.
ಹಾಸನ-ದುದ್ದ-ತಿಪಟೂರು ನಡುವಿನ 101 ಕಿ.ಮೀ.ಹಾಗೂ ಶ್ರೀ ರಂಗಪಟ್ಟಣ – ಕೆ.ಆರ್.ಪೇಟೆ -ಚನ್ನರಾಯಪಟ್ಟಣ ನಡುವಿನ 64 ಕಿ.ಮೀ. ರಸ್ತೆಅಭಿವೃದ್ಧಿಯ ಡಿಪಿಆರ್ ಸಿದ್ಧ ವಾಗುತ್ತಿದೆ. ಈ ರಸ್ತೆಗಳು ಹಾಸನ ಜಿಲ್ಲೆಯ ಮೂಲಸೌಕರ್ಯಅಭಿವೃದ್ಧಿಗೆ ಪೂರಕವಾಗಿವೆ. ಬಜೆಟ್‌ನಲ್ಲಿ ಕೆಶಿಪ್-4ಯೋಜನೆ ಅನುಷ್ಠಾನದ ಘೋಷ ಣೆಯಾದರೆಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ಮೂರುರಸ್ತೆಗಳ ಅಭಿವೃದ್ಧಿಯೂ ಸೇರಲಿದೆ. ಬಜೆಟ್‌ನಲ್ಲಿ ಈ ಘೋಷಣೆ ಆಗಬಹುದೆಂಬ ನಿರೀಕ್ಷೆಯಿದೆ.
ಕರಡಿ ಧಾಮ: ಅರಸೀಕೆರೆ ತಾಲೂಕಿನ ನಾಗಪುರಿಅರಣ್ಯ ವ್ಯಾಪ್ತಿಯ ಹಿರೇಕಲ್ಲು ಡ್ಡದಲ್ಲಿ ಕರಡಿಧಾಮನಿರ್ಮಾಣಕ್ಕೆ ರಾಜ್ಯ ವನ್ಯಜೀವಿ ಮಂಡಳಿಯು ಮೂರು ವರ್ಷಗಳ ಹಿಂದೆಯೇ ಅನುಮೋದನೆ ನೀಡಿದೆ. ಆನಂತರ ಅರಣ್ಯ ಇಲಾಖೆ ಸುಮಾರು 100 ಕರಡಿಗಳಿರುವ ಈ ಪ್ರದೇಶವನ್ನ ಒಳಗೊಂಡ 10,088 ಹೆಕ್ಟೇರ್ ಪ್ರದೇಶದಲ್ಲಿ ಕರಡಿಧಾಮ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿಎರಡು ವರ್ಷಗಳಾಗಿವೆ. ಯೋಜ ನೆ ಮಂಜೂರಾದರೆರಾಜ್ಯದ ಎರಡನೇ ಕರಡಿ ಧಾಮವಾಗಿ ರೂಪುಗೊಳ್ಳಲಿದೆ. ಕರಡಿಧಾಮ ನಿರ್ಮಾಣವಾದರೆ ಅರಸೀಕೆರೆ ತಾಲೂಕಿನ ಜನರಿಗೆ ಕರಡಿ ಗಳ ಉಪಟಳ ತಪ್ಪುತ್ತದೆ. ಜೊತೆಗೆ ನಾಗಪುರಿ ಅರಣ್ಯ ಪ್ರವಾಸಿ ತಾಣವಾಗಿಯೂಗುರ್ತಿಸಿಕೊಳ್ಳಲಿದೆ. ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಬಗ್ಗೆ ಜನತೆ ನಿರೀಕ್ಷೆ ಅಪಾರವಾಗಿದೆ.
– ಎನ್. ನಂಜುಂಡೇಗೌಡ