ಹಾಸನ : ಹಾಡಹಗಲೇ ಒಂಟಿ ಮಹಿಳೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿ ನಗ ನಗದು ದೋಚಿದ ಘಟನೆ ಹಾಸನ ನಗರದ ಲಕ್ಷ್ಮಿಪುರಂ ಬಡಾವಣೆಯಲ್ಲಿ ನಡೆದಿದೆ.
ಲಕ್ಷ್ಮಿಪುರಂ ಬಡಾವಣೆಯ ಮಂಜುಳಾ (42) ಹತ್ಯೆಗೀಡಾದ ಮಹಿಳೆ.
ಘಟನೆ ವಿವರ : ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ್ದಾರೆ ಈ ವೇಳೆ ಮಹಿಳೆಯನ್ನು ಬೆದರಿಸಿ ಲಾಕರ್ ಕೀ ಪಡೆದು ನಗ ನಗದು ದೋಚಿ ಬಳಿಕ ಕತ್ತಿಯಿಂದ ಮಹಿಳೆಯ ಕತ್ತು ಕೊಯ್ದು ಪರಾರಿಯಾಗಿದ್ದಾರೆ.
ಮಂಜುಳಾ ಅವರ ಪತಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಾಗಿದೆ.
ಹಾಸನ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ಪರಿಶೀಲನೆ.
ಇದನ್ನೂ ಓದಿ : ಬಯಲು ಶೌಚ ಪ್ರಿಯರಿಗೆ ಸನ್ಮಾನ! :ಚೊಂಬು ಹಿಡಿದು ಹೊರಟವರಿಗೆ ಗುಲಾಬಿ ಹೂ