Advertisement

ಮದ್ಯವ್ಯಸನಿ ಪತ್ನಿ ಕೊಲೆ ಮಾಡಿದ್ದ ಪತಿ ಸೆರೆ: ಮರಳ ರಾಶಿಯಲ್ಲಿ ಸಿಕ್ಕಿತ್ತು ಮಹಿಳೆಯ ಶವ

10:59 AM Dec 05, 2020 | sudhir |

ಹಾಸನ: ಮರಳ ರಾಶಿಯಲ್ಲಿ ಹೂತು ಹಾಕಿದ್ದ ಮಹಿಳೆಯ ಶವದ ಪ್ರಕರಣವನ್ನು 4 ತಿಂಗಳ ನಂತರ ಭೇದಿಸಿರುವ ಆಲೂರು ಠಾಣೆಯ ಪೊಲೀಸರು ಪತ್ನಿಯನ್ನುಕೊಲೆ ಮಾಡಿದ್ದ ಪತಿಯನ್ನು ಬಂಧಿಸಿದ್ದಾರೆ. ಆಲೂರು ತಾಲೂಕು, ಪಾಳ್ಯ ಹೋಬಳಿ, ಹೆದ್ದುರ್ಗ ಖೂಡಿಗೆಯ ಸಮೀಪ ಮರಳ ರಾಶಿಯಲ್ಲಿ ಮಹಿಳೆಯೊಬ್ಬಳ ಶವ ಕಳೆದ ಜುಲೈ 19 ರಂದು ಪತ್ತೆಯಾಗಿತ್ತು. ಮಹಿಳೆಯನ್ನು ಕೊಲೆ ಮಾಡಿ ಶವವನ್ನು ತಂದು ಮರಳ ರಾಶಿಯಲ್ಲಿ ಹೂತು ಹಾಕಿರಬಹುದು ಎಂದು ಶಂಕಿಸಿ ಆಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

ಮಾಹಿತಿಯನ್ನು ಕಲೆ ಹಾಕಿ ಕೊಲೆಯಾದ ಮಹಿಳೆ ಸುಮಿತ್ರ ಎಂದು, ಆಕೆಯ ಪತಿ ಸಿ.ಆರ್‌.ಮಂಜುನಾಥ್‌ ಕೊಲೆ ಮಾಡಿ ಶವವನ್ನು ಮರಳ ರಾಶಿಯಲ್ಲಿ ಹೂತು ಹಾಕಿ ಪರಾರಿಯಾಗಿದ್ದ ಎಂಬುದನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಪ್ರಕರಣದ ವಿವರ: ಆಲೂರು ತಾಲೂಕು ಬಿಕ್ಕೋಡು ಹೋಬಳಿ ಚೋಕನಹಳ್ಳಿ ಗ್ರಾಮದ ಸಿ.ಆರ್‌. ಮಂಜುನಾಥ್‌ 13 ವರ್ಷಗಳ ಹಿಂದೆ ಬೆಂಗಳೂರಿನ ಪರಪ್ಪ ಆಗ್ರಹಾರದ ಸುಮಿತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ಕೂಲಿ ಕಾರ್ಮಿಕರಾಗಿದ್ದ
ಮಂಜುನಾಥ್‌ ಮತ್ತು ಸುಮಿತ್ರಾ ದಂಪತಿಗೆ 10 ವರ್ಷದ ಗಂಡು, 7 ವರ್ಷದ ಹೆಣ್ಣು ಮಗು ಇದೆ. ಹೆದ್ದುರ್ಗ ಬಳಿ ಬಾಡಿಗೆ ಮನೆಯಲ್ಲಿದ್ದು ಕೂಲಿ ಮಾಡಿಕೊಂಡು ಜೀವಿಸುತ್ತಿದ್ದ ಸುಮಿತ್ರಾ ಮದ್ಯ ವ್ಯಸನಿಯಾಗಿದ್ದಳು ಹಾಗೂ ಅನೈತಿಕ ಸಂಬಂಧ
ಹೊಂದಿದ್ದಳೆಂದು, ಇದರಿಂದ ಬೇಸತ್ತಿದ್ದ ಮಂಜುನಾಥ್‌ ಆಕೆಯನ್ನು ಜುಲೈ 19 ರಂದು ರಾತ್ರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಮನೆಯ ಸಮೀಪವೇ ಇದ್ದ ಮರಳ ರಾಶಿಯಲ್ಲಿ ಸುಮಿತ್ರಾಳ ಶವವನ್ನು ಹೂತು ಹಾಕಿ ಪರಾರಿಯಾಗಿದ್ದ ಎಂದು ಎಸ್ಪಿ ತಿಳಿಸಿದರು.

ಇದನ್ನೂ ಓದಿ:ಕಾರು ಅಪಘಾತ: ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಪಾರು

ಸಂಬಂಧಿಕರಿಂದ ದೂರವಿದ್ದುದರಿಂದ ಸುಮಿತ್ರ ಕೊಲೆಯಾಗಿರುವ ಪ್ರಕರಣ ದಾಖಲಾಗಿರಲಿಲ್ಲ. ಆಕೆ ನಾಪತ್ತೆಯಾಗಿರುವ ಪ್ರಕರಣವೂ ದಾಖಲಾಗಿರಲಿಲ್ಲ. ಹಾಗಾಗಿ ಪ್ರಕರಣದ ಪತ್ತಿ ಸವಾಲಾಗಿತ್ತು. ಆಲೂರು ಠಾಣೆ ಇನ್ಸ್‌ಸ್ಪೆಕ್ಟರ್‌ ವೆಂಕಟೇಶ್‌ ಅವರು ಹಲವು ಗ್ರಾಮಗಳಿಗೆ ಹೋಗಿ ಮಾಹಿತಿ ಕಲೆ ಹಾಕಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.

Advertisement

ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಕಳ್ಳತನ ಪ್ರವೃತ್ತಿಯನ್ನೂ ರೂಢಿಸಿಕೊಂಡಿದ್ದರು ಎಂದು ಆರೋಪಿಯ ವಿಚಾರಣೆಯ ವೇಳೆ ತಿಳಿದು ಬಂದಿದೆ. ಮಂಜುನಾಥನು ಸುಮಿತ್ರಾಳ ಕೊಲೆ ಮಾಡುವ ಮೊದಲು ಮನೆಯಲ್ಲಿ ಜಗಳ ನಡೆದಿದೆ. ಆ ಸಂದರ್ಭದಲ್ಲಿ ಕೆಲವರು ಜಗಳ ಬಿಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗ ಮಕ್ಕಳು ತಂದೆಯ ಜೊತೆ ಇದ್ದಾರೆ ಎಂದು ವಿವರ ನೀಡಿದರು. ಈ ಪ್ರಕರಣದ ತನಿಖೆಯಲ್ಲಿ ಶ್ರಮಿಸಿದಿ ಇನ್‌ಸ್ಪೆಕ್ಟರ್‌ ವೆಂಕಟೇಶ್‌, ಸಿಬ್ಬಂದಿಗಳಾದ ನವೀನ, ಮಧು,
ರೇವಣ್ಣ, ಸೋಮಶೇಖರ, ಪ್ರವೀಣ, ಗುರುಮೂರ್ತಿ ಅವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next