ಹಾಸನ: ನಗರದ ಉತ್ತರ ಬಡಾವಣೆ ಸಂಸ್ಕೃತ ಭವನದ ಬಳಿ ಶನಿವಾರ (ಡಿ.5) ರಾತ್ರಿ ಯುವಕನೊಬ್ಬನನ್ನುಕೊಚ್ಚಿಕೊಲೆ ಮಾಡಿದ್ದ ಐವರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ನಗರದ ರಂಗೋಲಿ ಗುಂಡಿಹಳ್ಳದ ನಿವಾಸಿ ರಘುಗೌಡ (25) ಎಂಬಾತನ ಶನಿವಾರ ರಾತ್ರಿ8 .15ರ ಸಮಯದಲ್ಲಿ ಟೀ ಅಂಗಡಿ ಬಳಿ
ಕುಳಿತಿದ್ದಾಗಬೈಕ್‌ನಲ್ಲಿಬಂದವರುಕೊಚ್ಚಿಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಹಾಸನ ನಗರ ಠಾಣೆ ಪೊಲೀಸರು ಆರೋಪಿಗಳಾದ ಹಾಸನದ ರಂಗೋಲಿಹಳ್ಳ ತಿಮ್ಮೇಗೌಡರ ವಠಾರದ ನಿವಾಸಿ ನಂದಿ ಎಂಟರ್ ಪ್ರೈಸಸ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಭವಿತ್(19) ಮೊದಲ ಆರೋಪಿ, ಹಾಸನ ಶಾಂತಿನಗರ ನಿವಾಸಿ ಎಪಿಎಂಸಿಯಲ್ಲಿನ ತರಕಾರಿ ವ್ಯಾಪಾರಿ ತೇಜಸ್ (19) ಎರಡನೇ ಹಾಸನದ ವಿಜಯನಗರ ಪೆಟ್ರೋಲ್ ಬಂಕ್ ಸಮೀಪದ ನಿವಾಸಿ ತರಕಾರಿ ವ್ಯಾಪಾರಿ ಪುನೀತ್ (21) ಚನ್ನಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಐಟಿಐ ವಿದ್ಯಾರ್ಥಿ ನವೀನ್‌ಕುಮಾರ್ (21) ಹಾಸನದ ಶಾಂತಿನಗರ ನಿವಾಸಿ ಎಪಿಎಂಸಿಯಲ್ಲಿನ ತರಕಾರಿ ಸಗಟು ವ್ಯಾಪಾರಿ ವಿವೇಕ್(24) ಎಂಬುವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಶಾಸಕರ ದತ್ತು ಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ! ನೂತನ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆ
ಪ್ರಕರಣದ ವಿವರ: ಕೊಲೆಯಾದ ರಘುಗೌಡ ಸ್ನೇಹಿತ ತೇಜಸ್‌ನಿಂದ 1.50 ಲಕ್ಷ ರೂ. ಸಾಲ ಪಡೆದಿದ್ದ. ಅದರಲ್ಲಿ50 ಸಾವಿರ ರೂ. ವಾಪಸ್ ಕೊಟ್ಟಿದ್ದ. ಉಳಿದ ಸಾಲ ವಾಪಸ್ ಕೊಡುವಂತೆ ತೇಜಸ್ ಒತ್ತಾಯ ಮಾಡಿದಾಗ ಕೊಡುವುದಿಲ್ಲ. ಏನು ಬೇಕಾದರೂ ಮಾಡಿಕೋ ಎಂದು ಉಢಾಫೆಯಿಂದ ವರ್ತಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ರಘುಗೌಡನ ಮೇಲೆ ತೇಜಸ್ ಮತ್ತು ಸ್ನೇಹಿತರು ದ್ವೇಷ ಸಾಧಿಸುತ್ತಿದ್ದರು. ಶನಿವಾರ ಸಂಜೆ ಸಂಸ್ಕೃತ ಭವನದ ಎದುರು ಇರುವ ಜೆ.ಪಿ. ಟೀ ಅಂಗಡಿ ಹತ್ತಿರ ರಘು ಇರುವುದನ್ನು ಖಚಿತಪಡಿಸಿಕೊಂಡ ತೇಜಸ್ ಮತ್ತು ಆತನ ಸೇಹಿತರು ಎರಡು ಬೈಕ್‌ಗಳಲ್ಲಿ ಬಂದು ರಘುಗೌಡನ ಕಣ್ಣಿಗೆಕಾರದ ಪುಡಿ ಎರಚಿ ಮಚ್ಚಿನಿಂದಕೊಚ್ಚಿಕೊಲೆ ಮಾಡಿದ್ದರು.
ಈ ಪ್ರಕರಣದ ಆರೋಪಿಗಳ ಪತ್ತೆಗೆ ರಚನೆಯಾಗಿದ್ದ ಪೊಲೀಸರ ವಿಶೇಷ ತಂಡ ಮಾಹಿತಿ ಸಂಗ್ರಹಿಸಿ ಹೊಳೆನರಸೀಪುರದಲ್ಲಿ ತೇಜಸ್‌ನ ಸ್ನೇಹಿತ ಕಿಶನ್ ಎಂಬಾತನ ಮನೆಯಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಆರೋಪಿಗಳನ್ನು ಪತ್ತೆಹಚ್ಚಿಬಂಧಿಸಿದವಿಶೇಷ ಪೊಲೀಸ್ ತಂಡದ ಹಾಸನ ನಗರದ ಪೊಲೀಸ್ ಇನ್‌ಸ್ಪೆಕ್ಟರ್‌ಕೃಷ್ಣರಾಜು, ಪಿಎಸ್‌ಐ ಆಭಿಜಿತ್ ಹಾಗೂ ಸಿಬ್ಬಂದಿ ಗಳಾದ ಹರೀಶ್, ಪ್ರವೀಣ್, ಲತೇಶ್, ರವಿಕುಮಾರ್, ವೇಣುಗೋಪಾಲ, ದಿಲೀಪ್, ಜಮೀಲ್ ಅಹಮದ್‌ಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.