Advertisement
ಹಾಸನದ ಹೊರ ವಲಯ ಬೂವನಹಳ್ಳಿ ಬಳಿಸ್ವಾಧೀನಪಡಿಸಿಕೊಂಡಿರುವ ಸ್ಥಳಕ್ಕೆ ರಾಜ್ಯ ಇಂಧನಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ಮೋಹನ್ ಭಾನುವಾರಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳದಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಕೆಪಿಟಿಸಿಎಲ್ ಎಂಜಿನಿಯರ್‌ಗೆ ಸೂಚನೆ ನೀಡಿದರು.
Related Articles
Advertisement
ಜೆಡಿಎಸ್ ಒತ್ತಡಕ್ಕೆ ಸರ್ಕಾರ ಸ್ಪಂದನೆ: ಹಾಸನ ವಿಮಾನ ನಿಲ್ದಾಣಕ್ಕೆ 560 ಎಕರೆ ಭೂ ಸ್ವಾಧೀನವಾಗಿದಶಕಗಳೇ ಕಳೆದಿದ್ದು, 2008ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಮಾನ ನಿಲ್ದಾಣನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ಮಾಡಿದ್ದರು. ಆದರೆ, ಜೆಡಿಎಸ್- ಬಿಜೆಪಿಸರ್ಕಾರ ಪತನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು.2018ರಲ್ಲಿ ಮತ್ತೆ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ವಿಮಾನ ನಿಲ್ದಾಣ ನಿರ್ಮಾಣದ ಎಲ್ಲಾ ಅಡೆತಡೆ ನಿವಾರಿಸಿ ಕಾಮಗಾರಿಯ ಟೆಂಡರ್‌ಪ್ರಕಟಣೆಗೆ ಸಿದ್ಧತೆ ನಡೆಸಿದ್ದರು. ಆಷ್ಟರಲ್ಲಿ ಸಮ್ಮಿಶ್ರ ಸರ್ಕಾರ ಪತನದ ನಂತರ ಮತ್ತೆ ಯೋಜನೆ ನನೆಗುದಿಗೆ ಬಿತ್ತು.
ಬಿಜೆಪಿ ಸರ್ಕಾರ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ತಡೆ ಒಡ್ಡಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ದೇವೇಗೌಡ ಜಿಲ್ಲೆಯ ಜೆಡಿಎಸ್‌ಶಾಸಕರು ಮುಖ್ಯಮಂತ್ರಿ ನಿವಾಸದ ಬಳಿ ಧರಣಿನಡೆಸಲು ನಿರ್ಧರಿಸಿದ್ದ ಸಂದರ್ಭದಲ್ಲಿಮುಖ್ಯಮಂತ್ರಿ ಯಡಿಯೂರಪ್ಪ ಅವರು ಧರಣಿ ಕೈಬಿಡುವಂತೆ ದೇವೇಗೌಡರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಈ ಮಧ್ಯೆ ಹಾಸನದ ಶಾಸಕ ಪ್ರೀತಂ ಜೆ.ಗೌಡ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದುಮನವಿ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಸೇರಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆನೀಡುವುದಾಗಿ ವಿಧಾನಸಭೆ ಅಧಿವೇಶದನದಲ್ಲಿಯೇಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಾಸನವಿಮಾನ ನಿಲ್ದಾಣ ನಿರ್ಮಾಣದ ಯೋಜನೆಯ ನಿರೀಕ್ಷೆ ಈಗ ಗರಿಗೆದರಿದೆ.
ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ 20 ಕೋಟಿ ರೂ. :
ವಿಮಾನ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಪ್ರದೇಶದಲ್ಲಿ ಹಾದು ಹೋಗಿರುವ 220 ಕೆ.ವಿ. ವಿದ್ಯುತ್ ಮಾರ್ಗದ ಒಟ್ಟು 68 ಬೃಹತ್ ಗೋಪುರಗಳನ್ನು ಸ್ಥಳಾಂತರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹಾಸನದ ಹೊರವಲಯ ಬುಸ್ತೇನಹಳ್ಳಿಯಿಂದ ಮೆಳಗೋಡು ಗ್ರಾಮದ ನಡುವೆ ಹೊಸ ವಿದ್ಯುತ್ ಮಾರ್ಗನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 66 ವಿದ್ಯುತ್ ಮಾರ್ಗದ ಗೋಪುರಗಳನಿರ್ಮಾಣ ಆರಂಭವಾಗಿದೆ. ಇನ್ನೆರೆಡು ಗೋಪುರಗಳ ನಿರ್ಮಾಣಕ್ಕೆ ಭೂ ಸ್ವಾಧೀನದಸಮಸ್ಯೆಯಿದೆ. ಹಾಸನ ಜಿಲ್ಲಾಧಿಕಾರಿಯವರು ಆ ವಿವಾದ ಬಗೆಹರಿಸಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ವಿದ್ಯುತ್ ಮಾರ್ಗ ಬದಲಾವಣೆಗೆ ಒಟ್ಟು 20 ಕೋಟಿ ರೂ. ವೆಚ್ಚವಾಗುತ್ತದೆ. ಈಗಾಗಲೇ ಕೆಪಿಟಿಸಿಎಲ್ 5.5 ಕೋಟಿ ರೂ. ವೆಚ್ಚ ಮಾಡಿದೆ. 7 ರಿಂದ 8 ತಿಂಗಳೊಳಗೆ ವಿದ್ಯುತ್ ಮಾರ್ಗದ ಸ್ಥಳಾಂತರಮುಗಿಯಲಿದೆ ಎಂದು ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ನಾಗಾರ್ಜುನ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.