Advertisement
ನಗರದ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಾಲಕಿಯ ಹಾಸ್ಟೆಲ್ಗಳಿಗೆ ಅಪರಿಚಿತರು ಪ್ರವೇಶಿಸಲು ಪ್ರಯತ್ನಿಸುವ ಘಟನೆಗಳು ನಡೆದಿವೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಹಿಳಾ ವಸತಿ ನಿಲಯದ ವಿದ್ಯಾಥಿಗಳ ಸಂಪೂರ್ಣ ಸುರಕ್ಷತೆ ಅಧಿಕಾರಿಗಳು, ವಾರ್ಡ್‌ನಗಳು ಮತ್ತು ಭದ್ರತಾ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
Related Articles
Advertisement
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಅಭಿವೃದ್ದಿಗೆ ಪೂರಕವಾಗಿ ಇಂದಿನ ವಿದ್ಯಾರ್ಥಿ ನಿಲಯಗಳ ಸಮರ್ಥ ನಿರ್ವ ಹಣೆಯಾಗಬೇಕು. ವಿದ್ಯಾರ್ಥಿಗಳು ಸಮಾಜವನ್ನು ಎದುರಿಸುವ, ಶಕ್ತಿ ತುಂಬುವ ವ್ಯಕ್ತಿತ್ವ ವಿಕಸನ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ವೃತ್ತಿಪರ ಶಿಕ್ಷಣ ನೀಡಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿಗಳನ್ನು ನೀಡಬೇಕು. ಮೊಬೈಲ್ಗಳ ಕನಿಷ್ಠ ಬಳಕೆ ಮಾಡಬೇಕು. ಎಲ್ಲಾ ವಸತಿ ನಿಲಯಗಳಲ್ಲಿ ಕೈತೋಟ ನಿರ್ಮಾಣಕ್ಕೆ ಕ್ರಮ ಕೈಗೊಂಡು ತರಕಾರಿಗಳನ್ನು ಬೆಳೆಯುವುದರ ಜೊತೆಗೆ ಪರಿಸರಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. .
ನಗರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಚೇರಿಗೂ ದಿಢೀರ್ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು. ವಿಳಂಬಲ್ಲದೆ ಸಕಾರದ ಸೌಲತ್ತುಗಳನ್ನು ಒದಗಿಸಬೇಕು ಕಡತಗಳನ್ನು ಶೀಘ್ರ ಲೇವಾರಿಯಾಗದಿದ್ದಲ್ಲಿ ಸಂಬಂಧಪಟ್ಟವರ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ವಿದ್ಯಾರ್ಥಿನಿಲಯಗಳ ವಸತಿ ಶಾಲೆಗಳ ವ್ಯವಹಿಸ್ಥಿತವಾಗಿ ನಿರ್ವಹಣೆ ಯಾಗಬೇಕು ಎಂದರು.