Advertisement

Nilekani: ತಾವು ಶಿಕ್ಷಣ ಪಡೆದ ಬಾಂಬೆ IITಗೆ 315 ಕೋಟಿ ರೂಪಾಯಿ ದೇಣಿಗೆ ಕೊಟ್ಟ ನಿಲೇಕಣಿ

03:32 PM Jun 20, 2023 | Team Udayavani |

ಬೆಂಗಳೂರು: ಉದ್ಯಮಿ, ರಾಜಕಾರಣಿ, ಇನ್ಫೋಸಿಸ್‌ ಸಹಸಂಸ್ಥಾಪಕ ನಂದನ್‌ ನಿಲೇಕಣಿ ಅವರು ತಾವು ಶಿಕ್ಷಣ ಪಡೆದ ಬಾಂಬೆ ಐಐಟಿ (IIT) ಜತೆಗಿನ ನಿರಂತರ 50 ವರ್ಷಗಳ ಒಡನಾಟದ ನೆನಪಿಗಾಗಿ ಬರೋಬ್ಬರಿ 315 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಜೇವರ್ಗಿ ಮರಳು ಮಾಫಿಯಾಗೆ ಬಲಿಯಾದ ಪೇದೆ ಮನೆಗೆ ಪ್ರಿಯಾಂಕ್ ಖರ್ಗೆ ಭೇಟಿ; ಪರಿಹಾರ ವಿತರಣೆ

ನಂದನ್‌ ನಿಲೇಕಣಿ ಅವರು 1973ರಲ್ಲಿ ಬಾಂಬೆ ಐಐಟಿಯಲ್ಲಿ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡಿದ್ದರು. “ಬಾಂಬೆ ಐಐಟಿ ನನ್ನ ಜೀವನದ ತಳಹದಿಯಾಗಿದೆ. ನಾನು ಜೀವನದಲ್ಲಿ ಈ ಮಟ್ಟದಲ್ಲಿ ಬೆಳೆಯಲು ಈ ಶಿಕ್ಷಣ ಸಂಸ್ಥೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಪ್ರತಿಷ್ಠಿತ ಬಾಂಬೆ ಐಐಟಿಯೊಂದಿಗೆ 50 ವರ್ಷಗಳ ಒಡನಾಟವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ನಾನು ಈ ಸಂಸ್ಥೆಗೆ ಆಭಾರಿಯಾಗಿದ್ದು, ಭವಿಷ್ಯದ ದೃಷ್ಟಿಕೋನದ ಹಿನ್ನೆಲೆಯಲ್ಲಿ ದೇಣಿಗೆ ನೀಡಿದ್ದೇನೆ” ಎಂದು ನಿಲೇಕಣಿ ತಿಳಿರುವುದಾಗಿ ವರದಿ ವಿವರಿಸಿದೆ.

ನಾನು ನೀಡಿರುವ ದೇಣಿಗೆ ಹಣಕಾಸಿನ ಕೊಡುಗಿಗಿಂತ ಹೆಚ್ಚು. ನನಗೆ ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ನೀಡುವ ಮತ್ತು ನಾಳೆಯ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳವ ವಿದ್ಯಾ ಸಂಸ್ಥೆಗೆ ನೀಡಿದ ಕಾಣಿಕೆಯಾಗಿದೆ ಎಂದು ನಿಲೇಕಣಿ ಹೇಳಿದ್ದಾರೆ.


ಮಂಗಳವಾರ (ಜೂನ್‌ 20) ಬೆಂಗಳೂರಿನಲ್ಲಿ ನಂದನ್‌ ನಿಲೇಕಣಿ ಮತ್ತು ಬಾಂಬೆ ಐಐಟಿಯ ಪ್ರೊಫೆಸರ್‌ ಸುಭಾಶಿಸ್‌ ಚೌಧುರಿ ಜಂಟಿಯಾಗಿ MoUಗೆ ಸಹಿ ಹಾಕಿದ್ದರು.

Advertisement

ನಮ್ಮ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ನಂದನ್‌ ನಿಲೇಕಣಿ ಅವರು ಉದಾರ ಕೊಡುಗೆ ನೀಡುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ನಂದನ್‌ ನಿಲೇಕಣಿ ಈ ಮೊದಲು ಐಐಟಿಗೆ 85 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದರೊಂದಿಗೆ ನಿಲೇಕಣಿ ಒಟ್ಟು 400 ಕೋಟಿ ರೂಪಾಯಿ ದೇಣಿಗೆ ಕೊಟ್ಟಂತಾಗಿದೆ ಎಂದು ವರದಿ ಹೇಳಿದೆ.

ಈ ಐತಿಹಾಸಿಕ  ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿರುವುದರಿಂದ ಬಾಂಬೆ ಐಐಟಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಸಹಾಯಕವಾಗಲಿದೆ. ಅಷ್ಟೇ ಅಲ್ಲ ಜಾಗತಿಕವಾಗಿಯೂ ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಬಾಂಬೆ ಐಐಟಿ ಡೈರೆಕ್ಟರ್‌, ಪ್ರೊ.ಚೌಧುರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next