Advertisement
ರಾಜು ಪಂಜಾಬಿ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಜಾಂಡೀಸ್ ಕಾಯಲೆಗೆ ಹರಿಯಾಣದ ಹಿಸಾರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನಕಳೆದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸುವ ಹಂತಕ್ಕೆ ಅವರ ಆರೋಗ್ಯ ಹದಗೆಟ್ಟಿತ್ತು. ಮಂಗಳವಾರ ಅವರು ಕೊನೆಯುಸಿರೆಳೆದಿದ್ದಾರೆ.
Related Articles
Advertisement
ರಾಜು ಪಂಜಾಬಿ ಅವರು ಇತ್ತೀಚೆಗೆ (ಆ.12 ರಂದು) ‘ಆಪ್ಸೆ ಮಿಲ್ಕೆ ಯಾರಾ ಹಮ್ಕೊ ಅಚ್ಚಾ ಲಗಾ ಥಾ’ ಹಾಡನ್ನು ರಿಲೀಸ್ ಮಾಡಿದ್ದರು.
ಗಾಯಕನ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟರ್ ನಲ್ಲಿ ಖ್ಯಾತ ಹರ್ಯಾನ್ವಿ ಗಾಯಕ ಮತ್ತು ಸಂಗೀತ ನಿರ್ಮಾಪಕ ರಾಜು ಪಂಜಾಬಿ ಜಿ ಅವರ ನಿಧನವು ಹರಿಯಾಣ ಸಂಗೀತ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ!” ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಸ್ಥಳೀಯ ರಾವತ್ಸರ್ ಖೇಡಾಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ. ಅವರು ಪ್ರಸ್ತುತ ಹಿಸಾರ್‌ನ ಆಜಾದ್‌ನಗರದಲ್ಲಿ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.