Advertisement

ಈ ಊರಲ್ಲಿ ಜನಗಣಮನವೇ ಸುಪ್ರಭಾತ

11:14 AM Jan 06, 2018 | Team Udayavani |

ಭಾಣಕ್‌ಪುರ್‌: ಹರ್ಯಾಣದ ಫ‌ರೀದಾಬಾದ್‌ ಜಿಲ್ಲೆಯ ಭಾಣಕ್‌ಪುರ್‌ ಹಳ್ಳಿಯಲ್ಲಿ ಪ್ರತಿದಿನ ಬೆಳಗ್ಗೆ ಅನುಕರಣೀಯ ವಿದ್ಯಮಾನವೊಂದು ನಡೆಯಲಾರಂಭಿಸಿದೆ. ಬೆಳಗ್ಗೆ ಸರಿಯಾಗಿ 8 ಗಂಟೆಗೆ, ಈ ಹಳ್ಳಿಯ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರು ವವರು, ಹಸು ಎಮ್ಮೆಗಳನ್ನು ಮೇಯಿಸುವವರು, ಬೆರಣಿ ತಟ್ಟುವವರು, ಚಾಪೆ, ಬುಟ್ಟಿ ಹೆಣೆಯು ವವರು, ಇತರೆಲ್ಲಾ ಶ್ರಮಿಕ ವರ್ಗಗಳೂ ತಮ್ಮ ಕೆಲಸಗಳನ್ನು ಬದಿಗಿಟ್ಟು “ಸಾವಧಾನ್‌’ ಭಂಗಿಯಲ್ಲಿ ನಿಂತು ಗ್ರಾಮದೆಲ್ಲೆಡೆ ಮೊಳಗುವ ರಾಷ್ಟ್ರಗೀತೆಗೆ ದನಿಗೂಡಿಸುತ್ತಾರೆ!

Advertisement

ಒಬ್ಬಿಬ್ಬರಲ್ಲ, ಹತ್ತಿಪ್ಪತ್ತಲ್ಲ ಹಳ್ಳಿಯ ಬರೋಬ್ಬರಿ 5 ಸಾವಿರ ನಾಗರಿಕರು, ಒಟ್ಟಿಗೇ ನಿಂತು ರಾಷ್ಟ್ರಕ್ಕೆ ಹೀಗೊಂದು ಸ್ವರ ನಮನ ಸಲ್ಲಿಸಿ ದಿನ ಆರಂಭಿಸು ವುದನ್ನು ನೋಡಿದರೆ ಮೈ ನವಿರೇಳುವಂತಿದೆ. ಗುರುವಾರದಿಂದಲೇ ಇಂಥದ್ದೊಂದು ವ್ಯವಸ್ಥೆ ಇಲ್ಲಿ ಜಾರಿಯಾಗಿದೆ. ವಾಟ್‌ ಆ್ಯನ್‌ ಐಡಿಯಾ ಸರ್‌”ಪಂಚ್‌’ ಜೀ: ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಆರೆಸ್ಸೆಸ್‌ ಮುಖಂಡರಾಗಿರುವ 24 ವರ್ಷದ ಸಚಿನ್‌ ಮಂಡೋಟಿಯಾ ಅವರ ಐಡಿಯಾದ ಫ‌ಲವಿದು. 

ಎರಡು, ಮೂರು ದಿನ ಹಾಡಿ ಸುಮ್ಮ ನಾಗುವ ಜಾಯಮಾನದವರಲ್ಲ ಮಂಡೋಟಿಯಾ. ಈ ರಾಷ್ಟ್ರ ನಮನವನ್ನು ನಿರಂತರವಾಗಿಸಲು ಇಡೀ
ಗ್ರಾಮದಲ್ಲಿ 2.97 ಲಕ್ಷ ರೂ. ಖರ್ಚು ಮಾಡಿ 20 ಸ್ಪೀಕರ್‌ಗಳನ್ನು ಹಾಕಿಸಿ, ತಮ್ಮ ಮನೆಯಲ್ಲೇ ಇದರ ಕಂಟ್ರೋಲ್‌ ರೂಂ ಅನ್ನೂ ಸ್ಥಾಪಿಸಿದ್ದಾರೆ.
ಅಷ್ಟೇ ಅಲ್ಲ, ರಾಷ್ಟ್ರಗೀತೆ ಮೊಳಗುವ ವೇಳೆಯ ಚಿತ್ರಣವನ್ನು ದಾಖಲಿಸಲು ಗ್ರಾಮದ ಅಲ್ಲಲ್ಲಿ 22 ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಿದ್ದಾರೆ.

ದೇಶದ ಎರಡನೇ ಹಳ್ಳಿ
ಕಳೆದ ವರ್ಷ ಆಗಸ್ಟ್‌ನಲ್ಲಿ ತೆಲಂಗಾಣದ ಜಮ್ಮಿ ಕುಂಟ ಎಂಬಲ್ಲಿ ಇಂಥದ್ದೊಂದು ಸಂಪ್ರದಾಯ ಆರಂಭವಾಗುವ ಮೂಲಕ ದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ತಂದ ಮೊದಲ ಹಳ್ಳಿಯೆಂಬ ಹೆಗ್ಗಳಿಕೆ ತಂದಿತ್ತು. ಇದೀಗ, ಭಾಣಕ್‌ಪುರ್‌ ಈ ಸಂಪ್ರದಾಯ ಆಚರಣೆಗೆ ತಂದ ದೇಶದ 2ನೇ ಹಳ್ಳಿಯೆಂಬ ಹಿರಿಮೆಗೆ ಪಾತ್ರವಾಗಿದೆ. 

ಸದ್ಯಕ್ಕೆ ದಿನಕ್ಕೊಮ್ಮೆ ರಾಷ್ಟ್ರಗೀತೆ ಮೊಳಗಿಸಲಾಗುತ್ತಿದೆ. ಜನರು ಇದಕ್ಕೆ ಹೊಂದಿಕೊಂಡ ಮೇಲೆ ದಿನಕ್ಕೆರಡು ಬಾರಿ ರಾಷ್ಟ್ರಗೀತೆ ಹಾಡಿಸಲು ನಿರ್ಧರಿಸಲಾಗಿದೆ.
 ●ಸಚಿನ್‌ ಮಂಟೋಡಿಯಾ, ಭಾಣಕ್‌ಪುರ್‌ ಗ್ರಾಪಂ ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next