ಚಂಡೀಗಡ: ನೆರೆಯ ಪಂಜಾಬ್‌ನಲ್ಲಿ ಹಿಂದಿ ಭಾಷಿಕರ ಬಾಹುಳ್ಯವಿರುವ ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರ್ಪಡೆ ಮಾಡುವ ಹಾಗೂ ಎಸ್‌ವೈಎಲ್ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ನಿರ್ಣಯವನ್ನು ಮಂಗಳವಾರ ಹರ್ಯಾ ಣ ವಿಧಾನಸಭೆಯಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮಂಡಿಸಿದ್ದಾರೆ.
ಚಂಡೀಗಡದ ವಿಚಾರದಲ್ಲಿ ಹರ್ಯಾಣ ಮತ್ತು ಪಂಜಾಬ್ ನಡುವೆ ತಿಕ್ಕಾಟ ಜೋರಾಗುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡವನ್ನು ಕೂಡಲೇ ಪಂಜಾಬ್‌ಗ ಒಪ್ಪಿಸಬೇಕು ಎಂದು ಇತ್ತೀಚೆಗೆ ಪಂಜಾಬ್ ಸರ್ಕಾರ ನಿರ್ಣಯ ಅಂಗೀಕರಿಸಿತ್ತು.
ಇದರ ಬೆನ್ನಲ್ಲೇ ಹರ್ಯಾಣ ಸರ್ಕಾರವು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು, ಚಂಡೀಗಡ ವಿಚಾರದ ಕುರಿತು ಚರ್ಚಿಸಿದೆ ಹಾಗೂ ಪಂಜಾಬ್‌ನ ನಿಲುವನ್ನು ಖಂಡಿಸಿದೆ.
ಇದನ್ನೂ ಓದಿ:ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್
ಈ ವೇಳೆ ಮಾತನಾಡಿದ ಸಿಎಂ ಖಟ್ಟರ್, “ಪಂಜಾಬ್‌ನ ನಿರ್ಣಯವನ್ನು ಹರ್ಯಾಣದ ಜನರು ಸುತಾರಾಂ ಒಪ್ಪುವುದಿಲ್ಲ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳಿದ್ದಾರೆ.