Advertisement

ಹರ್ಯಾಣ ಶಾಸಕನ ಮನೆಗೆ ಇ.ಡಿ ದಾಳಿ: 4 ಕೋಟಿ ಮೌಲ್ಯದ ಐಷಾರಾಮಿ ಕಾರು, ಚಿನ್ನಾಭರಣ ವಶ

05:40 PM Jul 31, 2023 | Team Udayavani |

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಹರ್ಯಾಣದ ಕಾಂಗ್ರೆಸ್ ಶಾಸಕ ಧರಂ ಸಿಂಗ್ ಚೋಕರ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

Advertisement

ಮನೆ ಖರೀದಿದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಧರಂ ಸಿಂಗ್ ಮತ್ತು ಅವರ ಮಾಲೀಕತ್ವದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳ ಮೇಲೆ ಸೋಮವಾರ ದಾಳಿ ನಡೆಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ಸಮಲ್ಖಾ, ಗುರುಗ್ರಾಮ್ ಮತ್ತು ದೆಹಲಿಯಲ್ಲಿ ಹರಡಿರುವ 11 ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇಡಿ ನಾಲ್ಕು ಐಷಾರಾಮಿ ಕಾರುಗಳು, 14.5 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಮತ್ತು 4.5 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

ಪಾಣಿಪತ್ ಜಿಲ್ಲೆಯ ಸಮಲ್ಖಾ ಶಾಸಕರಾಗಿರುವ ಧರಂ ಸಿಂಗ್ ಚೋಕರ್ ಅವರು ತಮ್ಮ ಮಕ್ಕಳಾದ ಸಿಕಂದರ್ ಸಿಂಗ್ ಮತ್ತು ವಿಕಾಸ್ ಚೋಕರ್ ಅವರೊಂದಿಗೆ ಮಹಿರಾ ರಿಯಲ್ ಎಸ್ಟೇಟ್ ಗುಂಪಿನ ‘ಮಾಲೀಕರು ಮತ್ತು ಪ್ರವರ್ತಕರು’ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಬಾಲಿವುಡ್‌,ಟಾಲಿವುಡ್‌ ಸಿನಿಮಾದ ಮುಂದೆ ಮುಗ್ಗರಿಸದ ಹಾಲಿವುಡ್:‌ 2ನೇ ವಾರವೂ ಕಲೆಕ್ಷನ್‌ ಜೋರು

Advertisement

M/s ಸಾಯಿ ಐನಾ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಗುರುಗ್ರಾಮದ ಸೆಕ್ಟರ್ 68 ರಲ್ಲಿ ಮನೆಗಳನ್ನು ಒದಗಿಸುವ ಭರವಸೆಯ ಮೇರೆಗೆ ಕೈಗೆಟುಕುವ ವಸತಿ ಯೋಜನೆಯಡಿ 1497 ಮನೆ ಖರೀದಿದಾರರಿಂದ ಸುಮಾರು 360 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ವಂಚನೆ ಮತ್ತು ನಕಲಿಗಾಗಿ M/s ಸಾಯಿ ಐನಾ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಗುರುಗ್ರಾಮ್ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ತನಿಖೆಯನ್ನು ಪ್ರಾರಂಭಿಸಿತು.

ಮನೆ ಖರೀದಿದಾರರು ಮಹಿರಾ ಗ್ರೂಪ್ ವಿರುದ್ಧ ಒಂದು ವರ್ಷದಿಂದ ವಾಗ್ದಾನ ಮಾಡಿದ ಮನೆಗಳನ್ನು ಶೀಘ್ರವಾಗಿ ವಿತರಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next