ಹರ್ಯಾಣ: ಆಗಸ್ಟ್‌ನಲ್ಲಿ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಆರೋಪಿ ಎನ್ನಲಾಗಿದ್ದ ಹರಿಯಾಣ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣ ಪೊಲೀಸರ ಪ್ರಕಾರ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯಾತ್ರೆಯ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಖಾನ್ ಭಾಗಿಯಾಗಿರುವುದ್ದಕ್ಕೆ “ಸಾಕಷ್ಟು ಪುರಾವೆಗಳು” ಇವೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಫಿರೋಜ್‌ಪುರದ ಶಾಸಕ ಜಿರ್ಕಾ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಬಂಧನದಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ನಿಗದಿಪಡಿಸಲಾಗಿತ್ತು.
ಹಿಂಸಾಚಾರ ಭುಗಿಲೆದ್ದ ದಿನದಂದು ತಾನು ನುಹ್‌ನಲ್ಲಿ ಇರಲಿಲ್ಲವಾದ್ದರಿಂದ ತನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗುತ್ತಿದೆ ಎಂದು ಮಮ್ಮನ್ ಹೇಳಿದ್ದಾರೆ.
“ಸಾಕ್ಷಾಧಾರಗಳ ಕುರಿತು ಪರಿಶೀಲನೆ ಬಳಿಕ ಕಾಂಗ್ರೆಸ್ ನಾಯಕನನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಹರಿಯಾಣ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:Women Priests: ಇನ್ನು ತಮಿಳುನಾಡಿನ ಕೆಲ ದೇವಾಲಯಗಳಿಗೆ ಮಹಿಳಾ ಅರ್ಚಕರು…