Advertisement

ರೈತರ ಮೇಲೆ ಅಶ್ರುವಾಯು ಪ್ರಯೋಗ: ರೈತರೊಂದಿಗೆ ಹರ್ಯಾಣ ಸಿಎಂ ಖಟ್ಟರ್ ಮಾತುಕತೆ ರದ್ದು

04:32 PM Jan 10, 2021 | Team Udayavani |

ಚಂಡೀಗಢ: ಪ್ರತಿಭಟನಾ ನಿರತ ರೈತರೊಂದಿಗೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನಡೆಸಬೇಕಿದ್ದ ಮಾತುಕತೆ ರದ್ದಾಗಿದೆ.

Advertisement

ಹರ್ಯಾಣದ ಕೆಮಲಾ ಹಳ್ಳಿಗೆ ಬರಲು ಯತ್ನಿಸುತ್ತಿದ್ದ ರೈತರ ಮೇಲೆ ಪೊಲೀಸರು ಜಲ ಫಿರಂಗಿ, ಅಶ್ರುವಾಯು ಪ್ರಯೋಗ ಮಾಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಪ್ರಯೋಜನಗಳ ಬಗ್ಗೆ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ರೈತರೊಂದಿಗೆ ಸಮಾಲೋಚಿಸುವ ಕಾರ್ಯಕ್ರಮ ಕೆಮಲಾ ಹಳ್ಳಿಯಲ್ಲಿ ನಿಗದಿಯಾಗಿತ್ತು. ಈ ಸ್ಥಳಕ್ಕೆ ಆಗಮಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ ವಿರುದ್ಧ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಸಿಎಂ ಖಟ್ಟರ್ ಕಾರ್ಯಕ್ರಮ ರದ್ದಾಗಿದೆ.

ಘಟನೆಯ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಕೆಲವೊಂದು ಪ್ರತಿಭಟನಾಕಾರರು ಸಿಎಂ ಅವರು ಆಗಮಿಸಬೇಕಿದ್ದ ಹೆಲಿಪ್ಯಾಡ್​​ ಹಾನಿಗೊಳಿಸಲು ಯತ್ನಿಸಿದರು. ಈವೇಳೆ ಕಾರ್ಯಕ್ರಮ ಪರ ಹಾಗೂ ವಿರೋಧ ಇದ್ದ ರೈತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಸ್ಥಳದಲ್ಲಿ ಭಾರೀ ಪೊಲೀಸ್​ ಭದ್ರತೆ ನಿಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next