Advertisement
ಹೆಪಟೈಟಿಸ್ ಸಿ ವೈರಸ್ ಅನ್ನು ಈ ಮೂವರು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರನ್ನು ಸಮಿತಿಗಳು ಆಯ್ಕೆ ಮಾಡುತ್ತದೆ. ಔಷಧಿ ವಿಭಾಗದಲ್ಲಿ ನೊಬೆಲ್ ಪಡೆದವರನ್ನು ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ 5 ಸದಸ್ಯರ ಸಮಿತಿಯು ಆಯ್ಕೆ ಮಾಡುತ್ತದೆ. ಬಹುಮಾನವಾಗಿ ಅದರಲ್ಲಿ 1 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 8.22 ಕೋಟಿ ರೂ.) ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ವಿಜೇತರು ಇದ್ದರೆ, ಮೊತ್ತವನ್ನು ಸಮಾನವಾಗಿ ವಿತರಿಸಲಾಗುತ್ತದೆ. ಇದಲ್ಲದೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರದಲ್ಲೂ ನೊಬೆಲ್ ನೀಡಲಾಗುತ್ತದೆ. ಆ ಹೆಸರುಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಇದು ಹಂತ ಹಂತವಾಗಿ ಘೋಷಣೆಯಾಗುವ ಪ್ರಕ್ರಿಯೆಯಾಗಿದೆ. ಆದರೆ ಗಣಿತ ಕ್ಷೇತ್ರಕ್ಕೆ ಈ ಪುರಸ್ಕಾರವನ್ನು ಕೊಡಲಾಗುವುದಿಲ್ಲ.
ಹೆಪಟೈಟಿಸ್ ಎಂಬ ಪದವು liver and inflammation (ಯಕೃತ್ತು ಮತ್ತು ಉರಿಯೂತ) ಎಂಬ ಎರಡು ಗ್ರೀಕ್ ಪದಗಳ ಸಂಯೋಜನೆಯಾಗಿದೆ. ಈ ರೋಗವು ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಹೆಚ್ಚು ಆಲ್ಕೊಹಾಲ್ ಕುಡಿಯುವುದು, ಪರಿಸರದಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯವೂ ಇದಕ್ಕೆ ಒಂದು ಕಾರಣ. 1940ರ ದಶಕದಲ್ಲಿ ಎರಡು ಪ್ರಮುಖ ರೀತಿಯ ಹೆಪಟೈಟಿಸ್ ಪತ್ತೆಯಾಗಿದೆ.
Related Articles
Advertisement
ಇಂದು ಆಲ್‌ಫ್ರೆಡ್ ನೊಬೆಲ್ ಅವರ ಹೆಸರನ್ನು ಅರಿಯದವರು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅವರ ಹೆಸರು ಅಷ್ಟು ವ್ಯಾಪಕವಾಗಿ ಪರಿಚಿತವಾಗಿದೆ. ಅವರು ಇಂದಿಗೂ ಪರಿಚಿತನಾಗಲು ಮುಖ್ಯ ಕಾರಣವೆಂದರೆ ಮಾನವಕುಲದ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸುವವರಿಗೆ ನೀಡಲಾಗುವ ಪಾರಿತೋಷಕಗಳು. ಈ ಪಾರಿತೋಷಕಗಳನ್ನು ನೀಡಲು ತನ್ನ ಅಪಾರ ಸಂಪತ್ತನ್ನೆಲ್ಲ ಅವರು ಮುಡಿಪಾಗಿಟ್ಟಿದ್ದರೆ. ಆಲ್‌ಫ್ರೆಡ್ ನೊಬೆಲ್ ಸ್ವೀಡನ್ ದೇಶಕ್ಕೆ ಸೇರಿದವರಾಗಿದ್ದರೆ. ಅವರು 1833ರಲ್ಲಿ ಜನಿಸಿದರು. ಸ್ಫೋಟಕಗಳನ್ನು ಕಂಡು ಹಿಡಿಯುವುದರಲ್ಲಿ ಅವರಿಗೆ ಆಸಕ್ತಿ ಇತ್ತು. 1863ರಲ್ಲಿ ಅವರ ಕುಟುಂಬದ ನೈಟ್ರೊಗ್ಲಿಸರಿನ್ ಕಾರ್ಖಾನೆ ಸ್ಫೋಟಕ ವಸ್ತು ಸಿಡಿದು ನಾಶವಾದಾಗ ಆಲ್ಫೆ†ಡ್ ನೊಬೆಲ್ ತಮ್ಮ ಪ್ರಯೋಗಗಳನ್ನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಮುಂದುವರಿಸಬೇಕಾಯಿತು.
ಮೂಲತಃ ವಿಲಕ್ಷಣ ಸ್ವಭಾವದವರಾಗಿದ್ದ ಅವರು ದುಂದು ವೆಚ್ಚಗಾರರಾಗಿದ್ದರು. ಬೇಕೆಂದಲ್ಲಿಗೆ ಹೋಗಿ ಬರುತ್ತಿದ್ದರು. ಅವರ ಬ್ರಹ್ಮಚರ್ಯ ಬದುಕೂ ಅವರ ಈ ವಿಲಕ್ಷಣ ಸ್ವಭಾವಕ್ಕೆ ಕಾರಣವಾಗಿತ್ತು. ಪಟ್ಟು ಬಿಡದೆ ಮಾಡಿದ ಪ್ರಯೋಗಗಳ ಫಲವಾಗಿ ಆಲ್‌ಫ್ರೆಡ್ ನೊಬೆಲ್ ಕೊನೆಗೂ ಮೊತ್ತ ಮೊದಲನೆಯ, ಪರಿಣಾಮಕಾರಿಯಾದ ಸುರಕ್ಷಿತ ಸ್ಫೋಟಕ ವಸ್ತು ಡೈನಾಮೈಟ್ ಅನ್ನು ಕಂಡು ಹಿಡಿಯುವುದರಲ್ಲಿ ಸಫಲರಾದರು. ತಾವು ಕಂಡು ಹಿಡಿದ ಡೈನಾಮೈಟ್‌ಗೆ 1866ರಲ್ಲಿ ಗ್ರೇಟ್ ಬ್ರಿಟನ್‌ನಲ್ಲೂ, 1867ರಲ್ಲಿ ಅಮೆರಿಕದಲ್ಲೂ ಪೇಟೆಂಟ್ (ಸ್ವಾಮ್ಯದ ಹಕ್ಕು) ಪಡೆದರು.
1888ರಲ್ಲಿ ಅವರು ಮೊತ್ತ ಮೊದಲನೆಯ ಹೊಗೆರಹಿತ ನೈಟ್ರೊಗ್ಲಿಸರಿನ್ ಪೌಡರ್‌ಗಳಲ್ಲೊಂದಾದ ಬಾಲಿಸ್ಟೈಟ್ ಅನ್ನು ಉತ್ಪಾದಿಸಿದರು. ಇದರಿಂದ ಅವರು ಶ್ರೀಮಂತರಾಗುತ್ತಾ ಹೋದರು. ಉತ್ತರಾಧಿಕಾರಿಗಳಿಗೆ ಆಸ್ತಿಯನ್ನು ಬಿಟ್ಟು ಹೋಗುವ ಪದ್ಧತಿಯನ್ನು ವಿರೋಧಿಸಿದವರಲ್ಲಿ ಆಲ್ಫೆ†ಡ್ ನೊಬೆಲ್ ಅವರೂ ಒಬ್ಬರು. ಹೀಗಾಗಿ ತಮ್ಮ ಆಸ್ತಿಯನ್ನೆಲ್ಲ ಮಾನವಕುಲದ ಹಿತಕ್ಕಾಗಿ ಶ್ರಮಿಸುವ, ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಪಾರಿತೋಷಕ ನೀಡಲು ಮುಂದಾದರು. ಇವರು 1896ರಲ್ಲಿ ನಿಧನ ಹೊಂದಿದರು. ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರ), ಅರ್ಥಶಾಸ್ತ್ರ, ಸಾಹಿತ್ಯ ಹಾಗೂ ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ದುಡಿದವರಿಗೋಸ್ಕರ ಪ್ರತಿ ವರ್ಷ ನೊಬೆಲ್ ಪಾರಿತೋಷಕ ನೀಡಲಾಗುತ್ತದೆ.