Advertisement

ಐಪಿಎಲ್‌ನಿಂದ ಹೊರಬಿದ್ದ ಹರ್ಷಲ್‌ ಪಟೇಲ್‌

12:22 PM Apr 13, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ಐಪಿಎಲ್‌ನಲ್ಲಿ ನಿರೀಕ್ಷೆಗಿಂತಲೂ ಕೆಳ ಮಟ್ಟದ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತವೊಂದು ಎದುರಾಗಿದೆ. ತಂಡದ ಸೀಮರ್‌ ಹರ್ಷಲ್‌ ಪಟೇಲ್‌ ಬಲಗೈ ಮೂಳೆ ಮುರಿತಕ್ಕೆ ಸಿಲುಕಿದ್ದು, ಕೂಟದಿಂದ ಹೊರಬಿದ್ದಿದ್ದಾರೆ. ತಂಡದ ಕೋಚ್‌ ರಿಕಿ ಪಾಂಟಿಂಗ್‌ ಈ ವಿಷಯ ತಿಳಿಸಿದರು.

Advertisement

“ಕೆಕೆಆರ್‌ ಎದುರಿನ ಎ. ಒಂದರ ಪಂದ್ಯದ ವೇಳೆ ಹರ್ಷಲ್‌ ಪಟೇಲ್‌ ಬಲಗೈ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಅವರಿಗೆ 3-4 ವಾರಗಳ ವಿಶ್ರಾಂತಿ ಬೇಕಿದೆ. ಹೀಗಾಗಿ ಐಪಿಎಲ್‌ನ ಉಳಿದ ಅವಧಿಗೆ ಲಭ್ಯರಾಗುತ್ತಿಲ್ಲ. ಪಟೇಲ್‌ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಬೇಕಿದೆ’ ಎಂದು ಪಾಂಟಿಂಗ್‌ ಹೇಳಿದರು.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಮನೋಜ್‌ ಕಾರ್ಲಾ ಕೂಡ ಬಲ ಭುಜದ ತೋಳಿನ ನೋವಿಗೆ ಸಿಲುಕಿದ್ದಾರೆ ಎಂದು ಪಾಂಟಿಂಗ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next