Advertisement

ಹ್ಯಾರಿ ಪಾಟರ್ಸ್ ‘ಹ್ಯಾಗ್ರಿಡ್’ಖ್ಯಾತಿಯ ನಟ ರಾಬಿ ಕೋಲ್ಟ್ರೇನ್ ವಿಧಿವಶ

04:38 PM Oct 15, 2022 | Team Udayavani |

ಸ್ಕಾಟ್ಲೆಂಡ್ : ಹ್ಯಾರಿ ಪಾಟರ್ಸ್ ಹ್ಯಾಗ್ರಿಡ್ ಖ್ಯಾತಿಯ ರಾಬಿ ಕೋಲ್ಟ್ರೇನ್ ಶುಕ್ರವಾರ ( ಅಕ್ಟೋಬರ್ 14) ನಿಧನ ಹೊಂದಿದ್ದು, ಅವರಿಗೆ 72 ವರ್ಷ ವಯಸಾಗಿತ್ತು. ಮಧ್ಯ ಸ್ಕಾಟ್ಲೆಂಡ್‌ನ ಲಾರ್ಬರ್ಟ್‌ನಲ್ಲಿರುವ ಫೋರ್ತ್ ವ್ಯಾಲಿ ರಾಯಲ್ ಆಸ್ಪತ್ರೆಯಲ್ಲಿ ಹಿರಿಯ ನಟ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.

Advertisement

ಮಾಜಿ ಕೆಜಿಬಿ ಏಜೆಂಟ್ ರಾಬಿ ಕೋಲ್ಟ್ರೇನ್ ಜೇಮ್ಸ್ ಬಾಂಡ್ ಅವರ ಗೋಲ್ಡೆನಿ (1995) ಮತ್ತು ದಿ ವರ್ಲ್ಡ್ ಈಸ್ ನಾಟ್ ಎನಫ್ (1999) ಚಿತ್ರಗಳಲ್ಲಿರಷ್ಯನ್ ಮಾಫಿಯಾ ಬಾಸ್ ಪಾತ್ರವನ್ನು ನಿರ್ವಹಿಸಿದ್ದರು.

ಕೋಲ್ಟ್ರೇನ್, ಮಾರ್ಚ್ 30, 1950 ರಂದು ಗ್ಲ್ಯಾಸ್ಗೋ ಬಳಿಯ ರುಥರ್ಗ್ಲೆನ್‌ನಲ್ಲಿ  ಜನಿಸಿದರು, ನಟ, ಹಾಸ್ಯನಟ ಮತ್ತು ಬರಹಗಾರರಾಗಿ ವೃತ್ತಿಜೀವನದಲ್ಲಿ ಖ್ಯಾತಿ ಪಡೆದಿದ್ದರು.

ದೂರದರ್ಶನದಲ್ಲಿ, ಅವರು 1987 ರಲ್ಲಿ  BAFTA-ವಿಜೇತ BBC ಕಿರು-ಸರಣಿ ಟುಟ್ಟಿ ಫ್ರುಟ್ಟಿಯಲ್ಲಿ ಎಮ್ಮಾ ಥಾಂಪ್ಸನ್ ಜತೆ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next