Advertisement
ತಮ್ಮ ಪ್ರಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದು, ಈ ಕ್ಷೇತ್ರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ನೀಲನಕ್ಷೆಯೊಂದಿಗೆ ಕಣಕ್ಕಿಳಿಯುತ್ತಿರು ವುದಾಗಿ ತಿಳಿಸಿದರು.
ಇದರ ಜತೆಗೆ ಎಲ್ಲರ ಅಭಿಲಾಷೆ ಬೆಂಗಳೂರು,ಶಾಂತಿನಗರವಾಗಿಯೂ ಉಳಿಯಬೇಕು ಎಂಬುದು ನಮ್ಮ ಆಶಯ ಎಂದವರು ಹೇಳಿದ್ದಾರೆ. ಇಲ್ಲಿನ ಜನ ನನ್ನನ್ನು ಬಹುವಾಗಿ ಪ್ರೀತಿಸುತ್ತಾರೆ. ನನ್ನ ಕಾರ್ಯವೈಖರಿ ಕಂಡು ಮೂರನೇ ಅವಧಿಗೂ ನನ್ನನ್ನೇ ಆಯ್ಕೆ ಮಾಡುತ್ತಾರೆಂದು ನಂಬಿದ್ದೇನೆ ಎಂದರು.ಮೇ 12ರಂದು ನಡೆಯುವ ವಿಧಾನಸಭೆ
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ನನಗೆ, ಈ ಕ್ಷೇತ್ರದ ಋಣ ತೀರಿಸಲು ಮತ್ತೂಂದು ಅವಕಾಶ ಕೇಳಿದ್ದು, ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
Related Articles
Advertisement
ಉತ್ತಮ ಪ್ರತಿಕ್ರಿಯೆಬುಧವಾರ ಮತ ಯಾಚನೆ ಮಾಡಿದ ಕ್ಷೇತ್ರಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ
ಲಭ್ಯವಾಯಿತು. ಕ್ಷೇತ್ರದ ಜನತೆ ಆದರದಿಂದ ಬರಮಾಡಿಕೊಂಡು ಹರಸಿದ್ದು ಕಂಡುಬಂತು. ಅನೇಕ ಜನರು ಶಾಸಕರಿಂದಾದ ಒಳ್ಳೆಯ ಕೆಲಸವನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದಲ್ಲದೇ, ಮುಂದೆಯೂ ನಿಮ್ಮ ಕೈ ಬಲಪಡಿಸುವ ಮಾತನಾಡಿದ್ದು ವಿಶೇಷವಾಗಿತ್ತು. ಹತ್ತು ವರ್ಷಗಳಲ್ಲಿ ಶಾಂತಿ ನಗರ ಕ್ಷೇತ್ರ ಮಹತ್ತರ ಬದಲಾವಣೆ ಕಂಡಿದೆ. ಹಿಂದೆ ರಸ್ತೆ, ಒಳಚರಂಡಿ ಸಮಸ್ಯೆ, ಜೋರು ಮಳೆ ಬಂದರೆ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದು ಸೇರಿ ವಿವಿಧ ಸಮಸ್ಯೆಗಳಿದ್ದವು. ಇವುಗಳನ್ನು ಹಂತ ಹಂತವಾಗಿ ಬಗೆಹರಿಸಿದ್ದೇನೆ. ●ಎನ್.ಎ.ಹ್ಯಾರಿಸ್, ಶಾಸಕ ಹಾಗೂ
ಶಾಂತಿನಗರ ಕಾಂಗ್ರೆಸ್ ಅಭ್ಯರ್ಥಿ