Advertisement

ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಜರ್ಮನಿಯೆದುರು ಭಾರತಕ್ಕೆ ಗೆಲುವು

11:54 PM Apr 15, 2022 | Team Udayavani |

ಭುವನೇಶ್ವರ: ಭಾರತೀಯ ಹಾಕಿ ತಂಡವು ಅನನುಭವಿ ಜರ್ಮನಿ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಕೂಟದಲ್ಲಿ ತನ್ನ ಮುನ್ನಡೆಯನ್ನು ಇನ್ನಷ್ಟು ಭದ್ರಗೊಳಿಸಿದೆ.

Advertisement

ಭಾರತ ಪರ ಸುಖ್‌ಜೀತ್‌ ಸಿಂಗ್‌ (19ನೇ), ವರುಣ್‌ ಕುಮಾರ್‌ (41ನೇ) ಮತ್ತು ಅಭಿಷೇಕ್‌ 54ನೇ ನಿಮಿಷದಲ್ಲಿ ಗೋಲು ಹೊಡೆದರೆ ಜರ್ಮನಿ ಪರ ಏಕೈಕ ಗೋಲನ್ನು ಆ್ಯಂಟನ್‌ ಬೋಕೆಲ್‌ (45ನೇ) ದಾಖಲಿಸಿದರು. ಈ ಮೊದಲು ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತವು ಜರ್ಮನಿಯನ್ನು 3-0 ಗೋಲುಗಳಿಂದ ಸೋಲಿಸಿತ್ತು.
ಭಾರತ ಈ ಲೀಗ್‌ನಲ್ಲಿ ಆಡಿದ 12 ಪಂದ್ಯಗಳಿಂದ 27 ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದರೆ 10 ಪಂದ್ಯ ಆಡಿರುವ ಜರ್ಮನಿ 17 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಇದನ್ನೂ ಓದಿ:ಐಪಿಎಲ್‌: ಕೋಲ್ಕತಾ ನೈಟ್‌ರೈಡರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ಗೆ ಗೆಲುವು

22 ಸದಸ್ಯರ ತಂಡದ ಅರ್ಧದಷ್ಟು ಆಟಗಾರರು ಈ ಎರಡು ಪಂದ್ಯಗಳ ವೇಳೆ ಪದಾರ್ಪಣೆಗೈದಿದ್ದರು. ಹೀಗಾಗಿ ಜರ್ಮನಿ ಅಷ್ಟೊಂದು ಬಲಿಷ್ಠವಾಗಿರಲಿಲ್ಲ. ಈ ಕಾರಣಕ್ಕಾಗಿ ಭಾರತೀಯ ಆಟಗಾರರು ಎರಡೂ ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next