ಲಾಸೆನ್ (ಸ್ವಿಜರ್ಲೆಂಡ್): ಭಾರತೀಯ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ನಿವೃತ್ತ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಪ್ರತಿಷ್ಠಿತ ಎಫ್ಐಎಚ್ ವರ್ಷದ ಹಾಕಿ ಪ್ರಶಸ್ತಿ ಒಲಿದು ಬಂದಿದೆ. ಕ್ರ
ಮವಾಗಿ 2024ನೇ ಸಾಲಿನ ವರ್ಷದ ಹಾಕಿ ಆಟಗಾರ ಹಾಗೂ ಹಾಕಿ ಗೋಲ್‌ಕೀಪರ್ ಗೌರವಕ್ಕೆ ಭಾಜನರಾಗಿದ್ದಾರೆ. ಒಮಾನ್‌ನಲ್ಲಿ ಕಳೆದ ರಾತ್ರಿ ನಡೆದ 49ನೇ ಎಫ್ಐಎಚ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಹರ್ಮನ್‌ಪ್ರೀತ್ ಸಿಂಗ್ “ವರ್ಷದ ಹಾಕಿ ಆಟಗಾರ’ ಪ್ರಶಸ್ತಿ ರೇಸ್‌ನಲ್ಲಿ ನೆದರ್ಲೆಂಡ್ಸ್‌ನ ಜೆಪ್ ಡಿ ಮೊಲ್, ಥಿಯರಿ ಬ್ರಿಂಕ್‌ಮ್ಯಾನ್, ಜರ್ಮನಿಯ ಹ್ಯಾನ್ಸ್ ಮುಲ್ಲರ್, ಇಂಗ್ಲೆಂಡ್‌ನ ಜಾಕ್ ವ್ಯಾಲೇಸ್ ಅವರನ್ನು ಹಿಂದಿಕ್ಕಿದರು.
ಹರ್ಮನ್‌ಪ್ರೀತ್ ಸಿಂಗ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ 10 ಗೋಲು ಸಿಡಿಸಿದ್ದರು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಸ್ಪೇನ್ ಎದುರಿನ ಕಂಚಿನ ಪದಕ ಸ್ಪರ್ಧೆಯ ಎರಡೂ ಗೋಲುಗಳನ್ನು ಹೊಡೆದಿದ್ದರು. ಇದಕ್ಕೂ ಮೊದಲು 2020-21 ಮತ್ತು 2021-22ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ವಿದಾಯ ಘೋಷಿಸಿದ ಪಿ.ಆರ್. ಶ್ರೀಜೇಶ್ ನೆದರ್ಲೆಂಡ್ಸ್‌ನ ಪಿರ್ಮಿನ್ ಬ್ಲಾಕ್, ಸ್ಪೇನ್‌ನ ಲೂಯಿಸ್ ಕಾಲಾlಡೊ, ಜರ್ಮನಿಯ ಜೀನ್ ಪಾಲ್ ಡ್ಯಾನ್‌ಬರ್ಗ್ ಮತ್ತು ಆರ್ಜೆಂಟೀನಾದ ಥಾಮಸ್ ಸ್ಯಾಂಟಿಯಾಗೊ ಅವರನ್ನು ಮೀರಿಸಿದರು.