Advertisement

BCCI; ವೈಟ್‌ವಾಶ್ ಶಾಕ್: ಆಸ್ಟ್ರೇಲಿಯ ಸರಣಿಯಿಂದ ಸ್ಟಾರ್ ಹಿರಿಯರಿಗೆ ಕೊಕ್?

08:00 PM Nov 03, 2024 | Team Udayavani |

ಮುಂಬಯಿ: ಪ್ರವಾಸಿ ನ್ಯೂಜಿ ಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವುದು ಭಾರತದ ಕ್ರಿಕೆಟ್ ಅಭಿಮಾನಿಗಳು, ತಂಡ ಮತ್ತು ಬಿಸಿಸಿಐ ಅನ್ನು ತೀವ್ರ ಚಿಂತೆಗೀಡು ಮಾಡುವಂತೆ ಮಾಡಿದೆ.

Advertisement

ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭದ ಮೊದಲು ರಚನಾತ್ಮಕ ಹಂತಹಂತ ನೀತಿಯನ್ನು ಹೊರತರುತ್ತಿರುವ ವೇಳೆ ತವರಿನಲ್ಲಿ ಆಘಾತಕಾರಿ 0-3 ಸೋಲನ್ನು ಮೌಲ್ಯಮಾಪನವನ್ನು ಬಿಸಿಸಿಐ ಮಾಡಲೇಬೇಕಾಗಿರುವುದರಿಂದ ಕೆಲವು ಹಿರಿಯ ಭಾರತದ ಆಟಗಾರರ ಭವಿಷ್ಯವನ್ನು ಆಸ್ಟ್ರೇಲಿಯ ಪ್ರವಾಸದ ನಂತರ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಯ ಹಂತದಲ್ಲಿರುವ ವೇಳೆ, ನಾಲ್ವರು ಹಿರಿಯರ ಪೈಕಿ ಕನಿಷ್ಠ ಇಬ್ಬರಿಗೆ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೇ ಅಂತಿಮ ಪಂದ್ಯವಾಗುವ ಸಾಧ್ಯತೆಯಿದೆ.

ರೋಹಿತ್ ಹೇಳಿದ್ದೇನು?

ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮ ”ನಿಮಗೆ ಗೊತ್ತಿರುವಂತೆ ಸರಣಿ ಸೋಲುವುದು ಎಂದಿಗೂ ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲಿಲ್ಲ ಎಂದು ನಮಗೆ ತಿಳಿದಿದೆ, ಅದನ್ನು ಒಪ್ಪಿಕೊಳ್ಳಬೇಕು. ನ್ಯೂಜಿಲ್ಯಾಂಡ್ ನವರು ನಮಗಿಂತ ತುಂಬಾ ಚೆನ್ನಾಗಿ ಆಡಿದ್ದಾರೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ ಮತ್ತು ನಾವು ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ (ಬೆಂಗಳೂರು ಮತ್ತು ಪುಣೆಯಲ್ಲಿ) ನಾವು ಸಾಕಷ್ಟು ರನ್‌ಗಳನ್ನು ಬೋರ್ಡ್‌ಗೆ ಹಾಕಲಿಲ್ಲ ಮತ್ತು ನಾವು ಆಟದಲ್ಲಿ ಹಿಂದುಳಿದಿದ್ದೆವು. ಮುಂಬಯಿಯಲ್ಲಿ ನಮಗೆ 30 ರನ್ ಮುನ್ನಡೆ ಸಿಕ್ಕಿತು, ನಾವು ಮುಂದಿದ್ದೇವೆ ಎಂದು ನಾವು ಭಾವಿಸಿದ್ದೇವು. ನಾವು ಇನ್ನೂ ಉತ್ತಮವಾಗಿ ಆಡಬೇಕಾಗಿತ್ತು” ಎಂದರು.

Advertisement

“ನೋಡಿ, ನಾವು ಮುಂದೆ ನೋಡಬಹುದು ಎಂದು ನಾನು ಭಾವಿಸುವುದಿಲ್ಲ. ಮುಂದಿನ ಆಸ್ಟ್ರೇಲಿಯ ಸರಣಿಯತ್ತ ಗಮನಹರಿಸುವುದು ಮುಖ್ಯ. ನಾನು ಅದರಿಂದ ಆಚೆಗೆ ನೋಡುವುದಿಲ್ಲ. ಆಸ್ಟ್ರೇಲಿಯ ಸರಣಿ ನಮಗೆ ಈಗ ಬಹಳ ಮುಖ್ಯ. ನಂತರ ಏನಾಗುತ್ತದೆ ಎಂದು ಯೋಚಿಸುವುದಕ್ಕಿಂತ ನಾವು ಅದರತ್ತ ಗಮನ ಹರಿಸುತ್ತೇವೆ, ”ಎಂದು ಸರಣಿ ಸೋಲಿನ ಬಳಿಕ ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.

“ನಿಸ್ಸಂದೇಹವಾಗಿ ಕಾಳಜಿಗೆ ಕಾರಣವಾಗಿದ್ದು, ಒಂದು ವೇಳೆ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡದಿರುವುದು ಆತಂಕಕ್ಕೆ ಕಾರಣವಾಗಿದೆ” ಎಂದು ರೋಹಿತ್ ಹೇಳಿದರು.

“ಒಬ್ಬ ಆಟಗಾರನಾಗಿ, ನಾಯಕನಾಗಿ, ತಂಡವಾಗಿ, ನಾವೆಲ್ಲರೂ ಎದುರುನೋಡಬೇಕು ಮತ್ತು ಇಲ್ಲಿ ನಾವು ಸಾಧಿಸಲು ಸಾಧ್ಯವಾಗದ್ದನ್ನು ನಾವು ಹೇಗೆ ಸರಿಪಡಿಸಬಹುದು ಎಂಬುದನ್ನು ನೋಡಬೇಕಾಗಿದೆ. ಆಸ್ಟ್ರೇಲಿಯದಲ್ಲಿ ‘ಬಹಳ ವಿಶೇಷವಾದದ್ದೇನನ್ನಾದರೂ ನೀಡಲು ತಂಡವು ಹೋರಾಡಲಿದೆ’ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next