Advertisement

ವನಿತಾ ಪ್ರೀಮಿಯರ್‌ ಲೀಗ್‌: ಮುಂಬೈಗೆ ಹರ್ಮನ್‌ಪ್ರೀತ್‌ ಕೌರ್‌ ನಾಯಕಿ

11:13 PM Mar 01, 2023 | Team Udayavani |

ಮುಂಬಯಿ: ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಮುಂಬೈ ಇಂಡಿಯನ್ಸ್‌ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದ ರೊಂದಿಗೆ ಟೀಮ್‌ ಇಂಡಿಯಾದ ಪುರುಷರ ಹಾಗೂ ವನಿತಾ ತಂಡದ ಕ್ಯಾಪ್ಟನ್‌ಗಳಿಬ್ಬರೂ ಐಪಿಎಲ್‌-ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಯನ್ನು ಮುನ್ನಡೆಸಿದಂತಾಯಿತು.

Advertisement

ಐಪಿಎಲ್‌ನಲ್ಲಿ ರೋಹಿತ್‌ ಶರ್ಮ ಮುಂಬೈ ಸಾರಥಿಯಾಗಿದ್ದಾರೆ.

ಇತ್ತೀಚೆಗಷ್ಟೇ 150 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿದ ಹರ್ಮನ್‌ಪ್ರೀತ್‌ ಕೌರ್‌, ಕಳೆದ ಹರಾಜಿನಲ್ಲಿ 1.80 ಕೋಟಿ ರೂ. ಮೊತ್ತಕ್ಕೆ ಮುಂಬೈ ಪಾಲಾಗಿದ್ದರು.

ಹರ್ಮನ್‌ಪ್ರೀತ್‌ ಕೌರ್‌ ಆಯ್ಕೆಗೆ ಫ್ರಾಂಚೈಸಿಯ ಮಾಲಕಿ ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ ವನಿತಾ ತಂಡದ ನಾಯಕಿಯೂ ಆಗಿರುವ ಹರ್ಮನ್‌ಪ್ರೀತ್‌ ಕೌರ್‌ ಮುಂಬೈ ಇಂಡಿಯನ್ಸ್‌ ತಂಡದ ನೇತೃತ್ವ ವಹಿಸಿಕೊಳ್ಳುವುದು ನಮ್ಮ ಪಾಲಿನ ರೋಚಕ ಸಂಗತಿ. ಚಾರ್ಲೋಟ್‌ ಎಡ್ವರ್ಡ್ಸ್‌, ಜೂಲನ್‌ ಗೋಸ್ವಾಮಿ ಅವರ ಬೆಂಬಲದೊಂದಿಗೆ ಕೌರ್‌ ಇಲ್ಲಿಯೂ ಯಶಸ್ಸು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next