Advertisement

ನಕಲಿ ಪದವಿ ಪ್ರಮಾಣ ಪತ್ರದ ಸುಳಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌

06:00 AM Jul 04, 2018 | Team Udayavani |

ಚಂಡೀಗಢ: ಭಾರತದ ಟಿ20 ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅವರ ಪದವಿ ಪ್ರಮಾಣ ಪತ್ರ ನಕಲಿಯೆಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಹೊಂದಿರುವ ಉಪ ಪೊಲೀಸ್‌ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.

Advertisement

ಇದೇ ವರ್ಷ ಮಾರ್ಚ್‌ ತಿಂಗಳಲ್ಲಿ ಡಿವೈಎಸ್‌ಪಿಯಾಗಿ ಕ್ರೀಡಾ ಕೋಟಾದಡಿ ಹರ್ಮನ್‌ಪ್ರೀತ್‌ ಕೌರ್‌ನ ನೇಮಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ಮೀರತ್‌ನ ಚೌಧರಿ ಚರಣ್‌ಸಿಂಗ್‌ ವಿಶ್ವ ವಿದ್ಯಾಲಯ (ಸಿಸಿಎಸ್‌ ವಿವಿ  ಸರ್ಕಾರಕ್ಕೆ 2011ರಲ್ಲಿ ತಾವು ಪಡೆದಿದ್ದ ಬಿ.ಎ. ಪದವಿ ಪ್ರಮಾಣ ಪತ್ರವನ್ನು ನೀಡಿದ್ದರು. ನಿಯಮಗಳ ಪ್ರಕಾರ, ಪ್ರಮಾಣ ಪತ್ರದ ಪರಿಶೀಲನೆಗಾಗಿ ಸಿಸಿಎಸ್‌ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ಆ ವೇಳೆ, ವಿಶ್ವ ವಿದ್ಯಾಲಯದ ದಾಖಲೆಗಳಲ್ಲಿ ಹರ್ಮನ್‌ ಕೌರ್‌ ವಿವಿಯಲ್ಲಿ ಶಿಕ್ಷಣ ಪಡೆದ ಯಾವುದೇ ದಾಖಲೆಗಳಿಲ್ಲ ಎಂಬುದು ತಿಳಿದು ಬಂದಿದೆ ಎಂದು
ಮಾಧ್ಯಮಗಳ ವರದಿ ಮಾಡಿವೆ. ಈ ವಿಚಾರ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ನೇತೃತ್ವದ ಗೃಹ ಇಲಾಖೆಯ ಸಚಿವಾಲಯದ ಗಮನಕ್ಕೆ ತರಲಾಗಿದ್ದು, ಕೌರ್‌ ಪ್ರಮಾಣಪತ್ರ ನಕಲಿ ಎಂದು ಸಾಬೀತಾದಲ್ಲಿ ಅವರು ಹೊಂದಿರುವ ಡಿವೈಎಸ್‌ಪಿ ಹುದ್ದೆಯಿಂದ ವಜಾಗೊಳಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next